“ವೋಹ್ರಾ ನಮಗೆ ಬೇಡವಾಗಿತ್ತು, ಜಮ್ಮು ಕಾಶ್ಮೀರದ ನೂತನ ರಾಜ್ಯಪಾಲ ನಮ್ಮ ಜನ” ಎಂದ ಬಿಜೆಪಿ ನಾಯಕ

Update: 2018-08-30 10:27 GMT

ಶ್ರೀನಗರ, ಆ.30: ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ಹೊಸ ರಾಜ್ಯಪಾಲರು `ನಮ್ಮ ಜನ' ಎಂದು ಹೇಳುತ್ತಿರುವುದು ಕೇಳಿಸುತ್ತದೆ.

“ಈಗ ಇರುವ ರಾಜ್ಯಪಾಲರು ನಮ್ಮ ಜನ... ವೋಹ್ರಾ ಅವರು ಅಧಿಕಾರದಲ್ಲಿ ಮುಂದುವರಿಯುವುದು ನಮಗೆ ಬೇಡವಾಗಿತ್ತು,'' ಎಂದು ರೈನಾ ವೀಡಿಯೋದಲ್ಲಿ ಹೇಳಿದ್ದಾರೆ.

ರೈನಾ ಅವರಿಂದ ವಿವಾದಾತ್ಮಕ ಹೇಳಿಕೆ ಅಥವಾ ಕೃತ್ಯ ಇದೇ ಮೊದಲ ಬಾರಿಯೇನಲ್ಲ. ನೌಶೇರಾ ಕ್ಷೇತ್ರದ ಶಾಸಕರಾಗಿರುವ ಅವರು  2015ರಲ್ಲಿ ಪಕ್ಷೇತರ ಶಾಸಕ ಇಂಜಿನಿಯರ್ ರಶೀದ್ `ಬೀಫ್ ಪಾರ್ಟಿ' ಆಯೋಜಿಸಿದ್ದರೆಂಬ ಕಾರಣಕ್ಕೆ ಅವರಿಗೆ ಹಲ್ಲೆಗೈದಿದ್ದರು. ಮಾಜಿ ಶಾಸಕರೂ ಹಾಗೂ ಮಾಜಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ 71 ವರ್ಷದ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ 13ನೇ ರಾಜ್ಯಪಾಲರಾಗಿ ಕಳೆದ ಗುರುವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಐದು ದಶಕಗಳಿಂದ ಜಮ್ಮು ಕಾಶ್ಮೀರದಲ್ಲಿ ನಿವೃತ್ತ ಅಧಿಕಾರಿಗಳನ್ನೇ ರಾಜ್ಯಪಾಲರನ್ನಾಗಿಸುತ್ತಿದ್ದರೆ, ಮಲಿಕ್ ಅವರ ನೇಮಕಾತಿಯೊಂದಿಗೆ ಆ ಪದ್ದತಿಗೆ ಅಂತ್ಯ ಹಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News