ಎಲ್ಲೆಮೀರಿದ ವಿವಿಐಪಿ ಸಂಸ್ಕೃತಿ: ಸಚಿವೆಗಾಗಿ ರೈಲ್ವೆ ಪ್ಲಾಟ್‍ಫಾರ್ಮ್ ಪ್ರವೇಶಿಸಿದ ಕಾರು!

Update: 2018-08-30 12:13 GMT

ಭೋಪಾಲ್, ಆ.30: ವಿವಿಐಪಿ ಸಂಸ್ಕೃತಿ ಸ್ವಲ್ಪ ಅತಿಯಾಯಿತು ಎಂದು ಹೇಳಬಹುದಾದ ಘಟನೆಯಲ್ಲಿ ರಾಜಸ್ಥಾನ ಕ್ರೀಡಾ ಸಚಿವೆ ಯಶೋಧರ ರಾಜೇ ಸಿಂಧಿಯ ಅವರ ಕಾರನ್ನು ನಿಯಮಗಳಿಗೆ ವಿರುದ್ಧವಾಗಿ ನೇರವಾಗಿ ರೈಲ್ವೆ ಪ್ಲಾಟ್‍ಫಾರ್ಮ್ ಪ್ರವೇಶಿಸಲು ಅನುಮತಿಸಲಾಗಿದೆ. ಸಚಿವೆ ರೈಲಿನಿಂದ ಇಳಿದೊಡನೆ ಗೇಟಿನ ತನಕ ನಡೆದುಕೊಂಡು ಬಂದು ಕಾರು ಹತ್ತುವ ಬದಲು ನೇರವಾಗಿ ರೈಲಿನಿಂದಿಳಿದು ಕಾರು ಹತ್ತುವಂತೆ ಮಾಡಲು ಇಂತಹ ಒಂದು ಕ್ರಮವನ್ನು ಪೊಲೀಸರ ಕಣ್ಣೆದುರೇ ಕೈಗೊಳ್ಳಲಾಗಿದೆ.

ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ಲಾಟ್‍ಫಾರ್ಮ್ ನಲ್ಲಿದ್ದ ಇತರ ಪ್ರಯಾಣಿಕರಿಗೆ ಅನಾನುಕೂಲ ಸೃಷ್ಟಿಸಿದರೂ ಕ್ಯಾರೇ ಅನ್ನದೆ ಸಚಿವೆಯ ಕಾರು ಪ್ಲಾಟ್‍ಫಾರ್ಮ್ ಗೆ ನುಗ್ಗಿದೆ. ಅನಧಿಕೃತವಾಗಿ ಒಳ ಪ್ರವೇಶಿಸುವವರಿಗೆ ರೂ 500 ದಂಡ ವಿಧಿಸಲಾಗುವುದು ಎಂಬ ಸೂಚನಾ ಫಲಕ ರೈಲ್ವೆ ನಿಲ್ದಾಣದ ಗೇಟ್ ಪಕ್ಕದಲ್ಲಿಯೇ ಇರುವುದು ಕೂಡ ಕಾಣಬಹುದಾಗಿದೆ.

ಸಚಿವರ ಕಾರನ್ನು ಪ್ಲಾಟ್‍ಫಾರ್ಮ್ ಒಳಗೆ ಬಿಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ತಮ್ಮ ಕಾರು ಪ್ಲಾಟ್‍ಫಾಮ್ ಪ್ರವೇಶಿಸಿದ್ದೇಕೆ ಎಂದು ಸಚಿವೆಯನ್ನು ಪ್ರಶ್ನಿಸಿದಾಗ ತನಗೆ ನಿಯಮಗಳ ಬಗ್ಗೆ ತಿಳಿದಿಲ್ಲ ಎಂದು ಆಕೆ ಹೇಳಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News