ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ

Update: 2018-08-31 07:05 GMT

ಹೊಸದಿಲ್ಲಿ, ಆ.31: ರೂಪಾಯಿ ಮೌಲ್ಯ ಕುಸಿತ ಶುಕ್ರವಾರವೂ ಮುಂದುವರಿದಿದ್ದು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಇಂದು 71ಕ್ಕೆ ಮೊತ್ತ ಮೊದಲ ಬಾರಿ ತಲುಪಿದೆ.

ಗುರುವಾರ ಸಂಜೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 70.74 ಆಗಿತ್ತು. ಶುಕ್ರವಾರ  ಬೆಳಗ್ಗೆ  ರೂಪಾಯಿಯ ಆರಂಭಿಕ ಮೌಲ್ಯ 70.95 ಆಗಿತ್ತಾದರೆ ನಂತರ ಅದು 71ಕ್ಕೆ ತಲುಪಿದ್ದು ಕಳೆದ ಮೂರು ವರ್ಷಗಳಲ್ಲಿಯೇ ರೂಪಾಯಿ ಮೌಲ್ಯದ ಗರಿಷ್ಠ ಕುಸಿತ ಉಂಟಾಗುವ ಸಾಧ್ಯತೆಯಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.

ಏರುತ್ತಿರುವ ಕಚ್ಛಾ ತೈಲ ಬೆಲೆಗಳು ಹಾಗೂ ಡಾಲರಿಗೆ ಹೆಚ್ಚಿದ ಬೇಡಿಕೆ  ಈ ಬೆಳವಣಿಗೆಗೆ ಕಾರಣವೆನ್ನಲಾಗಿದೆ. ಕಚ್ಛಾ ತೈಲ ಬೆಲೆ ಬ್ಯಾರೆಲ್ ಗೆ 78 ಡಾಲರ್ ತಲುಪಿದೆ. ಏರುತ್ತಿರುವ ಹಣದುಬ್ಬರದ ಭಯ ಜತೆಗೆ  ಜೂನ್ ತ್ರೈಮಾಸಿಕದ ಜಿಡಿಪಿ ಡಾಟಾದ ಬಗ್ಗೆ ಇರುವ ಅನಿಶ್ಚಿತತೆಯೂ ರೂಪಾಯಿ ದರ ಕುಸಿಯಲು ಇತರ ಕಾರಣಗಳೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News