ರಾಬ್ರಿ ದೇವಿ, ತೇಜಸ್ವಿ ಯಾದವ್ ಗೆ ಜಾಮೀನು

Update: 2018-08-31 07:08 GMT

ಹೊಸದಿಲ್ಲಿ, ಆ.31: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ) ಹೋಟೆಲ್ ಹಗರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.

ಐಆರ್ ಸಿಟಿಸಿ ಹೋಟೆಲ್ ನಿರ್ವಹಣಾ ಒಪ್ಪಂದ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ  ಸಿಬಿಐ ಕಳೆದ ಎಪ್ರಿಲ್ ನಲ್ಲಿ 12 ಮಂದಿ ಆರೋಪಿಗಳು ಮತ್ತು ಎರಡು ಸಂಸ್ಥೆಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.

2006ರಲ್ಲಿ ರಾಂಚಿ ಮತ್ತು ಒಡಿಶಾದ ಪುರಿಯಲ್ಲಿ ಎರಡು ಐಆರ್ ಸಿಟಿಸಿ ಹೋಟೆಲ್ ಗಳನ್ನು ನಡೆಸಲು ನೀಡಲಾದ ಗುತ್ತಿಯಲ್ಲಿ  ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ, ಲಾಲು ಆಪ್ತರಾದ ಪಿ.ಸಿ.ಗುಪ್ತಾ ಮತ್ತು ಅವರ ಪತ್ನಿ ಸರಳಾ ಗುಪ್ತಾ  ಆರೋಪ ಎದುರಿಸುತ್ತಿದ್ದಾರೆ.

ಲಾರಾ ಪ್ರಾಜೆಕ್ಟ್ ಸಂಸ್ಥೆ ಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಲಂಚ  ಪಡೆದಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಆಗಸ್ಟ್ 24ರಂದು ಚಾರ್ಜ್ ಶೀಟ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News