ಕಲಂ 35 ಎ ವಿಚಾರಣೆ 2019 ಜನವರಿ ವರೆಗೆ ಮುಂದೂಡಿಕೆ

Update: 2018-08-31 19:13 GMT

ಹೊಸದಿಲ್ಲಿ, ಆ. 31: ಸಂವಿಧಾನದ 35-ಎ ಕಲಂನ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಂದಿನ ವರ್ಷ ಜನವರಿಗೆ ಮುಂದೂಡಿದೆ.

 ರಾಜ್ಯದಲ್ಲಿ ಮುಂಬರುವ ಸ್ಥಳೀಯಾಡಳಿತ ಚುನಾವಣೆಯನ್ನು ಕೇಂದ್ರ ಹಾಗೂ ಜಮ್ಮು ಕಾಶ್ಮೀರ ಸರಕಾರ ಉಲ್ಲೇಖಿಸಿದೆ ಹಾಗೂ ಕಲಂ 35 ಎ ವಿರುದ್ಧದ ದೂರಿನ ವಿಚಾರಣೆ ಮುಂದೂಡುವಂತೆ ಕೋರಿದೆ.

35 ಎ ಕಲಂ ಕುರಿತ ಯಾವುದೇ ಚರ್ಚೆ ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜಮ್ಮು ಹಾಗೂ ಕಾಶ್ಮೀರ ಸರಕಾರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ಪೀಠಕ್ಕೆ ಹೇಳಿದೆ.

 35 ಎ ಕಲಂ ವಿಚಾರಣೆಯನ್ನು ಮುಂದೂ ಡುವಂತೆ ಜಮ್ಮು ಹಾಗೂ ಕಾಶ್ಮೀರ ಸರಕಾರ ಬುಧವಾರ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News