ಇಲಿಜ್ವರಕ್ಕೆ ಕಲ್ಲಿಕೋಟೆಯಲ್ಲಿ ಇನ್ನಿಬ್ಬರು ಬಲಿ

Update: 2018-09-01 09:03 GMT

ಕಲ್ಲಿಕೋಟೆ, ಸೆ.1: ಕಲ್ಲಿಕೋಟೆ ಜಿಲ್ಲೆಯಲ್ಲಿ ಇಲಿಜ್ವರಕ್ಕೆ ಇನ್ನಿಬ್ಬರು ಬಲಿಯಾಗಿದ್ದಾರೆ. ಮುಕ್ಕಂ ಎಂಬಲ್ಲಿನ ಶಿವದಾಸನ್, ಕಾರಂದೂರಿನ ಕೃಷ್ಣನ್ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಲಿಜ್ವರದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಕಲ್ಲಿಕೋಟೆಯ ಜಿಲ್ಲೆಯ ವ್ಯಾಪ್ತಿಯಲ್ಲಿ ಇಲಿಜ್ವರಕ್ಕೆ ಬಲಿಯಾದವರ ಸಂಖ್ಯೆ 12 ಆಗಿದೆ.

ಕಳೆದ ಎಂಟು ತಿಂಗಳಲ್ಲಿ ಕೇರಳದಲ್ಲಿ ಇಲಿಜ್ವರಕ್ಕೀಡಾಗಿ 97 ಮಂದಿ ಮೃತಪಟ್ಟಿದ್ದಾರೆ. ನೆರೆಹಾವಳಿ, ಮಳೆಯ ಹಾನಿ ಎದುರಿಸಿದ  ಪ್ರದೇಶಗಳಲ್ಲಿ ಈಗ ಇಲಿಜ್ವರ ಹಬ್ಬುತ್ತಿದೆ ಎನ್ನಲಾಗಿದೆ. ಕೇರಳ ಸರಕಾರದ ಆರೋಗ್ಯ ಇಲಾಖೆ ಇಲಿಜ್ವರದ ಕುರಿತು ಸಾರ್ವಜನಿಕರು ಅತೀವ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದೆ.

ತಿರುವನಂತಪುರಂನಲ್ಲಿ ಆರು ಮಂದಿ, ಪತ್ತನಂತಿಟ್ಟದಲ್ಲಿ ಏಳು ಮಂದಿ, ಆಲಪ್ಪುಳದಲ್ಲಿ ನಾಲ್ವರು, ಎರ್ನಾಕುಳಂನಲ್ಲಿ ಇಬ್ಬರು, ತೃಶೂರಿನಲ್ಲಿ ಇಬ್ಬರು, ಪಾಲಕ್ಕಾಡಿನಲ್ಲಿ ಒಬ್ಬರು, ಕಲ್ಲಿಕೋಟೆಯಲ್ಲಿ 12 ಮಂದಿ, ಕಾಸರಗೋಡಿನಲ್ಲಿ ಮೂರು ಮಂದಿ ಇಲಿಜ್ವರದಿಂದ ಬಳಲುತ್ತಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News