ಪ್ರಧಾನಿ ಹತ್ಯೆಗೇ ಸಂಚು ನಡೆದಿದೆಯೆಂದರೆ, ದೇಶದ ಸಾಮಾನ್ಯರ ಗತಿಯೇನು: ಯು.ಟಿ.ಖಾದರ್

Update: 2018-09-01 13:00 GMT

ಬೆಂಗಳೂರು, ಸೆ.1: ಪ್ರಧಾನಿ ನರೇಂದ್ರ ಮೋದಿಗೆ ಹತ್ಯೆ ಸಂಚು ನಡೆದಿದೆಯೆಂದರೆ, ದೇಶದ ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿದೆ ಎಂದು ವಸತಿ ಸಚಿವ ಯು.ಟಿ.ಖಾದರ್ ಅತಂಕ ವ್ಯಕ್ತಪಡಿಸಿದರು.

ಶನಿವಾರ ಕಾವೇರಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ಯೆ ಸಂಚು ಸಂಬಂಧ ಮೂರು ತಿಂಗಳಿಗೊಮ್ಮೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬುದನ್ನು ಬಿಟ್ಟು, ಕೂಲಂಕಷವಾಗಿ ತನಿಖೆ ಮಾಡಲಿ ಎಂದು ಅಭಿಪ್ರಾಯಿಸಿದರು.

ದೇಶದ ಅಪರಾಧ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಸಿಬಿಐಗೆ ಇರುತ್ತದೆ. ಆದಾಗ್ಯೂ ಕೇವಲ ಮೂರು ತಿಂಗಳಿಗೊಮ್ಮೆ ಮಾತ್ರ ಕೇವಲ ಕಾರ್ಯಾಚರಣೆ ನಡೆಸಿ ಸುಮ್ಮನಾಗುವುದು ಯಾಕೆ. ಪ್ರಧಾನಿ ಹತ್ಯೆ ಸಂಚು ರೂಪಿಸಿರುವುದು ನಿಜವೇ ಆಗಿದ್ದರೆ ಆರೋಪಿಗಳನ್ನು ದೇಶ ದ್ರೋಹಿಗಳೆಂದು ಪರಿಗಣಿಸಿ, ಕಠಿಣ ಶಿಕ್ಷೆ ವಿಧಿಸಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News