ಆರ್ ಟಿಐ ಮಾಹಿತಿ ಕೇಳಿದವನಿಗೆ ಜಿಎಸ್‍ಟಿ ಪಾವತಿಸುವಂತೆ ಹೇಳಿದ ಇಲಾಖೆ !

Update: 2018-09-03 10:07 GMT

ಭೋಪಾಲ್, ಸೆ.3: ಮಧ್ಯ ಪ್ರದೇಶ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಮಂಡಳಿಯಿಂದ ಮಾಹಿತಿ  ಕೋರಿ ಅರ್ಜಿ ಸಲ್ಲಿಸಿದ್ದ ಆರ್ ಟಿಐ ಕಾರ್ಯಕರ್ತರೊಬ್ಬರಿಗೆ ಸರಕು ಸೇವಾ ತೆರಿಗೆ ಅಥವಾ ಜಿಎಸ್ ಟಿ ಪಾವತಿಸುವಂತೆ ಹೇಳಲಾಗಿದೆ.

ಮಧ್ಯಪ್ರದೇಶದಲ್ಲಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಚೇರಿಯ ನವೀಕರಣಕ್ಕಾಗಿ ಮಂಡಳಿ ಮಾಡಿರುವ ವೆಚ್ಚದ ಮಾಹಿತಿಯನ್ನು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಅಜಯ್ ದುಬೆ ಕೇಳಿದ್ದರು. ಆದರೆ ದುಬೆ ಅವರಿಗೆ ಅಚ್ಚರಿಯುಂಟು ಮಾಡುವ ಬೆಳವಣಿಗೆಯಲ್ಲಿ ಅವರಿಗೆ ಕೇಂದ್ರೀಯ ಜಿಎಸ್‍ಟಿ ಮತ್ತು ರಾಜ್ಯ ಜಿಎಸ್‍ಟಿಯನ್ನು ತಲಾ ಶೇ.9ರಂತೆ ಪಾವತಿಸುವಂತೆ ಹೇಳಲಾಗಿತ್ತು.

ಪ್ರತಿ ಪುಟಕ್ಕೆ ತಲಾ ಎರಡು ರೂಪಾಯಿಯಂತೆ 18 ಪುಟಗಳ ಫೋಟೋ ಕಾಪಿ ವೆಚ್ಚವಾಗಿ 36 ರೂ. ಹಾಗೂ ಕೇಂದ್ರೀಯ ಜಿಎಸ್‍ಟಿ ಹಾಗೂ ರಾಜ್ಯ ಜಿಎಸ್‍ಟಿಯೆಂದು ತಲಾ ರೂ 3.5 ಅವರು ಪಾವತಿಸಿದ್ದರೆಂದು ದಾಖಲೆಗಳು ತಿಳಿಸುತ್ತವೆ.

 ಈ ರೀತಿ ಅರ್ಜಿದಾರರಿಂದ ಜಿಎಸ್‍ಟಿ ಸಂಗ್ರಹಿಸುವುದು ಸರಿಯಲ್ಲ ಎಂದು ದುಬೆ ಹೇಳುತ್ತಾರೆ. ಆರ್‍ ಟಿಐ ಕಾಯಿದೆ 2005 ಅನ್ವಯ ಮಾಹಿತಿ ನೀಡುವ ಸೇವೆಗೆ ಜಿಎಸ್ಟಿ ಅನ್ವಯಿಸಬಾರದು ಎಂದು  ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‍ಟಿ ಮಂಡಳಿ ಜನವರಿಯಲ್ಲಿನ ತನ್ನ ಸಭೆಯಲ್ಲಿ ಮಾಡಿತ್ತು. ಕೇಂದ್ರ ಮಾಹಿತಿ ಆಯೋಗ ಕೂಡ ಪ್ರಕರಣದವೊಂದರ ವಿಚಾರಣೆ ವೇಳೆ ಮಾಹಿತಿ ನೀಡುವುದಕ್ಕೆ ಬೆಲೆ ಸೂಚಿಸಲಾಗದು ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News