ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದ ತಡೆಗೆ ಆಗ್ರಹಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

Update: 2018-09-05 06:44 GMT

 ಹೊಸದಿಲ್ಲಿ,ಸೆ.5: ಭಾರತ ಹಾಗೂ ಫ್ರಾನ್ಸ್ ನಡುವೆ ನಡೆದಿರುವ ರಫೇಲ್ ಯುದ್ದ ವಿಮಾನ ಒಪ್ಪಂದದ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಬುಧವಾರ ಅಸ್ತು ಎಂದಿದೆ.

  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್‌ಗಳಾದ ಎ.ಎಂ. ಖಾನ್ವೀಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ರಫೇಲ್ ಒಪ್ಪಂದ ಬಗ್ಗೆ ಶೀಘ್ರವೇ ವಿಚಾರಣೆಗೆ ಆಗ್ರಹಿಸಿ ವಕೀಲ ಎಂ.ಎಲ್. ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಮುಂದಿನ ವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ಫ್ರಾನ್ಸ್ ಹಾಗೂ ಭಾರತ ನಡುವೆ ನಡೆದಿರುವ ರಫೇಲ್ ಯುದ್ದ ವಿಮಾನ ಒಪ್ಪಂದದಲ್ಲಿ ಭಿನ್ನತೆಗಳಿವೆ ಎಂದು ಆರೋಪಿಸಿರುವ ಅಡ್ವಕೇಟ್ ಶರ್ಮಾ ಈ ಒಪ್ಪಂದಕ್ಕೆ ತಡೆ ಹೇರಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News