ಪಿಯು ಉಪನ್ಯಾಸಕರ ನೇಮಕಾತಿ- ಸ್ಪರ್ಧಾತ್ಮಕ ಪರೀಕ್ಷೆಗೆ ಲಿಪಿಕಾರರ ಸೌಲಭ್ಯ

Update: 2018-09-08 16:35 GMT

ಬೆಂಗಳೂರು, ಸೆ.8: ಪಿಯು ಉಪನ್ಯಾಸಕರ ನೇಮಕಾತಿ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಗೆ ಲಿಪಿಕಾರರ ಸೌಲಭ್ಯವನ್ನು ಪಡೆಯಲು ಅಂಧ/ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಸೆ.18ರಂದು ವೈದ್ಯಕೀಯ ತಪಾಸಣೆಯನ್ನು ಬೆಂಗಳೂರಿನ ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಸಲಾಗುವುದು.

ಈಗಾಗಲೇ ಆನ್‌ಲೈನ್ ಮೂಲಕ ದಾಖಲಿಸಿರುವ ಅಂಧ/ದೃಷ್ಟಿಮಾಂದ್ಯ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ವೈದ್ಯಕೀಯ ತಪಾಸಣೆಗೆ ಹಾಜರಾಗಲು ಈ ಮೂಲಕ ಸೂಚಿಸಿದೆ. ಅಭ್ಯರ್ಥಿಯ ಅಂಗವಿಕಲತೆಯ ಅರ್ಹತೆಯ ಬಗ್ಗೆ ವೈದ್ಯರ ಸಮಿತಿಯು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಬಹುದಾಗಿದೆ.

ಡಿಪ್ಲೋಮಾ ಸಿಇಟಿ-ಅಣುಕು ಸೀಟು ಹಂಚಿಕೆ ಫಲಿತಾಂಶ: ಡಿಪ್ಲೋಮಾ ಅಭ್ಯರ್ಥಿಗಳಿಗೆ ಎರಡನೆ ವರ್ಷದ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಅಭ್ಯರ್ಥಿಗಳು ದಾಖಲಿಸಿದ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಅಣುಕು ಸೀಟು ಹಂಚಿಕೆಯನ್ನು ಮಾಡಿ ಫಲಿತಾಂಶವನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಸೆ.10ರ ಬೆಳಗ್ಗೆ 10ರೊಳಗಾಗಿ ಇಚ್ಛೆ/ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಾಯಿಸಬಹುದಾಗಿದೆ/ಸೇರಿಸಬಹುದಾಗಿದೆ/ಅಳಿಸಬಹುದಾಗಿದೆ. ನಿಗದಿತ ಸಮಯದ ನಂತರ ಬದಲಾವಣೆಗಳನ್ನು ಮಾಡಲು ಅವಕಾಶವಿರುವುದಿಲ್ಲ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News