ಈಜಿಪ್ಟ್: ಮುಸ್ಲಿಮ್ ಬ್ರದರ್‌ಹುಡ್‌ನ 75 ಮಂದಿಗೆ ಮರಣದಂಡನೆ, 47 ಮಂದಿಗೆ ಜೀವಾವಧಿ

Update: 2018-09-08 16:56 GMT

ಕೈರೋ (ಈಜಿಪ್ಟ್), ಸೆ. 8: 2013ರಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ, ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್‌ನ ಉನ್ನತ ನಾಯಕರು ಸೇರಿದಂತೆ 75 ಮಂದಿಗೆ ಈಜಿಪ್ಟ್‌ನ ನ್ಯಾಯಾಲಯವೊಂದು ಶನಿವಾರ ಮರಣದಂಡನೆ ವಿಧಿಸಿದೆ.

ಅದೇ ವೇಳೆ, ಬ್ರದರ್‌ಹುಡ್ ಮುಖ್ಯಸ್ಥ ಮುಹಮ್ಮದ್ ಬದಾಯಿ ಹಾಗೂ 46 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ, 739 ಆರೋಪಿಗಳು ಹತ್ಯೆಯಿಂದ ಹಿಡಿದು ಸಾರ್ವಜನಿಕ ಸೊತ್ತು ನಾಶದವರೆಗಿನ ವಿವಿಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪತ್ರಿಕಾ ಛಾಯಾಗ್ರಾಹಕ ಮಹ್ಮೂದ್ ಅಬೂ ಝಾಯಿದ್‌ಗೆ 5 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.

2012ರಲ್ಲಿ ನಡೆದ ಚುನಾವಣೆಯಲ್ಲಿ ಬ್ರದರ್‌ಹುಡ್‌ನ ನಾಯಕ ಮುಹಮ್ಮದ್ ಮುರ್ಸಿ ಈಜಿಪ್ಟ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಒಂದು ವರ್ಷದ ಬಳಿಕ ಸೇನೆಯು ಅವರನ್ನು ವಜಾಗೊಳಿಸಿತು. ಇದನ್ನು ಪ್ರತಿಭಟಿಸಿ ಮುರ್ಸಿ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. 2013 ಆಗಸ್ಟ್‌ನಲ್ಲಿ ನಡೆದ ಪ್ರತಿಭಟನೆಯನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 600 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News