ರಾಮ ಮಂದಿರ ನಿರ್ಮಾಣವಾಗುತ್ತದೆ, ಏಕೆಂದರೆ ಸುಪ್ರೀಂ ಕೋರ್ಟ್ ನಮ್ಮದು: ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶ ಸಚಿವ

Update: 2018-09-08 16:53 GMT

ಲಕ್ನೋ, ಸೆ.8: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಏಕೆಂದರೆ ಸುಪ್ರೀಂ ಕೋರ್ಟ್ ನಮ್ಮದು ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಪ್ರದೇಶದ ಸಚಿವ ಮುಕುತ್ ಬಿಹಾರಿ ವರ್ಮಾ ವಿವಾದವನ್ನು ಸೃಷ್ಟಿಸಿದ್ದಾರೆ.

“ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮಂದಿರ ನಮ್ಮದು. ಮಂದಿರ ನಿರ್ಮಾಣಕ್ಕಾಗಿ ನಾವೆಲ್ಲಾ ಸಂಕಲ್ಪ ತೊಟ್ಟಿದ್ದೇವೆ” ಎಂದರು. ಈ ಸಂದರ್ಭ ರಾಮ ಮಂದಿರಕ್ಕೆ ಸಂಬಂಧಿಸಿ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ. ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ” ಎಂದು ಪತ್ರಕರ್ತರು ಹೇಳಿದಾಗ ಪ್ರತಿಕ್ರಿಯಿಸಿದ ಸಚಿವ ವರ್ಮಾ, “ಸುಪ್ರೀಂ ಕೋರ್ಟ್ ಕೂಡ ನಮ್ಮದೇ. ನ್ಯಾಯಾಂಗವೂ ನಮ್ಮದೇ. ಈ ದೇಶವೂ ನಮ್ಮದು ಮತ್ತು ದೇವಸ್ತಾನವೂ ನಮ್ಮದು” ಎಂದರು.

ವರ್ಮಾ ಹೇಳಿಕೆಗೆ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News