ಯೋಗೇಂದ್ರ ಯಾದವ್ ಪೊಲೀಸ್ ವಶಕ್ಕೆ: ಸರ್ವಾಧಿಕಾರದ ಕ್ರಮ ಎಂದ ಕಮಲ್ ಹಾಸನ್

Update: 2018-09-09 09:18 GMT

ಚೆನ್ನೈ, ಸೆ.9: ಪ್ರತಿಭಟನೆಯೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿರುವ ನಟ, ನಿರ್ದೇಶಕ, ಮಕ್ಕಳ್ ನೀದಿ ಮಯ್ಯಮ್ ಸ್ಥಾಪಕ ಕಮಲ್ ಹಾಸನ್, ಇದು ಸರ್ವಾಧಿಕಾರದ ಕ್ರಮ ಎಂದಿದ್ದಾರೆ.

‘ಸಹೋದರ’ ಯೋಗೇಂದ್ರ ಯಾದವ್ ನಮ್ಮ ರಾಜ್ಯದ ರೈತರ ಸಮಸ್ಯೆಯನ್ನು ಆಲಿಸಲು ಬಂದಿದ್ದರು. ಅವರನ್ನು ವಶಕ್ಕೆ ಪಡೆದುಕೊಂಡ ಕ್ರಮವನ್ನು ಖಂಡಿಸಬೇಕು ಮತ್ತು ಟೀಕಿಸಬೇಕು. ಇದು ಸರ್ವಾಧಿಕಾರದ ಕ್ರಮ ಎಂದು ಕಮಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಭಯವಿಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಜನರಿಗೆ ಸ್ವಾತಂತ್ರ್ಯವಿರಬೇಕು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News