ಭಾರತ್ ಬಂದ್‌ಗೆ ಎಸ್‌ಡಿಪಿಐ ಬೆಂಬಲ

Update: 2018-09-09 14:10 GMT

ಬೆಂಗಳೂರು, ಸೆ. 9: ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆಯ ನೀತಿ ಹಾಗೂ ನಿರ್ಲಕ್ಷವನ್ನು ವಿರೋಧಿಸಿ ನಾಳೆ (ಸೆ.10) ನಡೆಯುವ ಬಂದ್ ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಬೆಲೆ ಗಣನೀಯವಾಗಿ ಕುಸಿದಿದ್ದರೂ ಭಾರತದಲ್ಲಿ ತೈಲ ಹಾಗೂ ಗ್ಯಾಸ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಸರಕಾರ ಜನತೆಯನ್ನು ವಂಚಿಸುತ್ತಿದ್ದು, ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದೆ. ಎಲ್ಲ ಜಾತ್ಯತೀತ ಶಕ್ತಿಗಳು ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಒಗ್ಗಟ್ಟಾಗಬೇಕೆಂದು ಎಸ್‌ಡಿಪಿಐನ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News