ಯುವ ಸಮುದಾಯ ನಾಯಕತ್ವ ಗುಣ ಬೆಳೆಸಿಕೊಳ್ಳಲಿ: ಹಿರಿಯ ವಿಜ್ಞಾನಿ ಡಾ.ಅತ್ರೇ

Update: 2018-09-09 15:41 GMT

ಬೆಂಗಳೂರು, ಸೆ.8: ಯುವ ಸಮುದಾಯ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶಕ್ಕೆ ಸಂಪತ್ತಾಗಬೇಕೆಂದು ಹಿರಿಯ ವಿಜ್ಞಾನಿ ಡಾ.ಅತ್ರೇ ಆಶಿಸಿದರು.

ಸೇಂಟ್ ಮೀರಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕೌಶಲ್ಯ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆ ತಮ್ಮ ಅಮೂಲ್ಯ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ವತೋಮುಖವಾಗಿ ಬೆಳೆಯಬೇಕೆಂದು ತಿಳಿಸಿದರು.

ನನ್ನ ಸಹದ್ಯೋಗಿಯಾಗಿದ್ದ ಡಾ.ಅಬ್ದುಲ್ ಕಲಾಂ ಯುವ ಜನತೆಯ ಬಗ್ಗೆ ಅಪಾರ ಭರವಸೆ ಹೊಂದಿದ್ದರು. ಹೀಗಾಗಿ ಹಿರಿಯ ಸಾಧಕರ ತತ್ವದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉನ್ನತ ಮಟ್ಟಕ್ಕೇರಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೆ ಕಾರ್ಯ ಪ್ರವೃತ್ತರಾಗಬೇಕೆಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಇರ್ಫಾನ್ ಖಾನ್ ಮಾತನಾಡಿ, ಕೌಶಲ್ಯ ಭಾರತ ಕಾರ್ಯಕ್ರಮಕ್ಕೆ ತಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸ್ಕಿಲ್ ಫಾರ್ ಇಂಡಿಯಾ ತಂಡಕ್ಕೆ ಅಭಿನಂದನೆಗಳು ತಿಳಿಸಿದರು. ಪ್ರಾಧ್ಯಾಪಕ ಸಯ್ಯದ್ ಯೇಜಸ್ ಪಾಷ ಮತ್ತು ವಿದ್ಯಾರ್ಥಿಗಳ ತಂಡ ವಿಜ್ಞಾನ ಗೀತೆಗಳನ್ನು ಹಾಡಿದರು. ಈ ವೇಳೆ ಸ್ಕಿಲ್ ಫಾರ್ ಇಂಡಿಯಾ ಸದಸ್ಯ ಕೆ.ಪಿ.ಮಂಜುನಾಥ್, ವೆಂಕಟೇಶ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News