ಮಿತ್ರ ಪಡೆಗಳಿಂದ ಹೌದಿ ಕ್ಷಿಪಣಿ ಉಡಾವಣಾ ಸ್ಥಾವರ ಧ್ವಂಸ

Update: 2018-09-09 17:31 GMT

 ಜಿದ್ದಾ, ಸೆ. 9: ಯಮನ್‌ನ ಕಾನೂನುಬದ್ಧ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಅರಬ್ ಮಿತ್ರಕೂಟದ ಯುದ್ಧವಿಮಾನಗಳು ಶನಿವಾರ ಸಅದ ರಾಜ್ಯದ ಅಸ್-ಸಫ್ರ ಜಿಲ್ಲೆಯ ಅಲ್-ಅಮ್ಶಿಯ ಪ್ರದೇಶದಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರಿಗೆ ಸೇರಿದ ಪ್ರಕ್ಷೇಪಕ ಕ್ಷಿಪಣಿ ಉಡಾವಣಾ ಸ್ಥಾವರವೊಂದನ್ನು ನಾಶಪಡಿಸಿದವು.

ಸ್ಥಾವರದ ಸ್ಥಳವನ್ನು ಪತ್ತೆಹಚ್ಚಲಾಯಿತು ಹಾಗೂ ಅದರ ವಿವರಗಳನ್ನು ಯುದ್ಧವಿಮಾನಗಳಿಗೆ ರವಾನಿಸಲಾಯಿತು ಎಂದು ಮಿತ್ರಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದರು.

ಬಳಿಕ ಯುದ್ಧ ವಿಮಾನಗಳು ಶನಿವಾರ ಮುಂಜಾನೆ ದಾಳಿ ನಡೆಸಿ ಸ್ಥಾವರವನ್ನು ಧ್ವಂಸಗೊಳಿಸಿದವು.

ಬಂಡುಕೋರರು ಬಳಸುತ್ತಿದ್ದ ರಾಡಾರ್ ಸ್ಥಾವರವನ್ನೂ ಇದೇ ಸಂದರ್ಭದಲ್ಲಿ ನಾಶಪಡಿಸಲಾಯಿತು. ಈ ರಾಡಾರ್ ಮಿತ್ರಕೂಟದ ವಿಮಾನಗಳ ಚಲನವಲನಗಳ ಮೇಲೆ ವೌಂಟ್ ಅನಿಮ್ ಎಂಬ ಸ್ಥಳದಲ್ಲಿ ನಿಗಾ ಇಟ್ಟಿತ್ತು.

ಈ ದಾಳಿಯಲ್ಲಿ ಹಲವಾರು ಹೌದಿ ತಾಂತ್ರಿಕರು ಸಾವಿಗೀಡಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News