ಇಂಧನ ಬೆಲೆಏರಿಕೆಯನ್ನು ಎದುರಿಸಲು ರಾಜಸ್ಥಾನ ಸಚಿವರು ನೀಡಿದ್ದಾರೆ ಈ ‘ಅದ್ಭುತ’ ಸಲಹೆ!

Update: 2018-09-10 12:53 GMT

ಜೈಪುರ,ಸೆ.10: ಇಂಧನ ಬೆಲೆಗಳು ದಿನೇ ದಿನೇ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಸೋಮವಾರ ಪ್ರತಿಪಕ್ಷಗಳು ಕರೆ ನೀಡಿದ್ದ ಭಾರತ ಬಂದ್‌ನ ನಡುವೆಯೇ ರಾಜಸ್ಥಾನದ ಸಚಿವ ರಾಜಕುಮಾರ ರಿಣವಾ ಅವರು ಈ ಸಮಸ್ಯೆಯನ್ನು ಎದುರಿಸಲು ಜನರಿಗೆ ಅದ್ಭುತ ಸಲಹೆಯೊಂದನ್ನು ನೀಡಿದ್ದಾರೆ.ಇಂಧನಗಳ ಬೆಲೆಏರಿಕೆಯನ್ನು ಎದುರಿಸಲು ಇತರ ಖರ್ಚುಗಳನ್ನು ಕಡಿಮೆ ಮಾಡಿ ಎಂಬ ಬಿಟ್ಟಿಸಲಹೆಯನ್ನು ಮುಂದಿಟ್ಟಿದ್ದಾರೆ!

ಇಂಧನ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳನ್ನು ಅವಲಂಬಿಸಿವೆ. ಅಲ್ಲಿ ಕಚ್ಚಾತೈಲ ಬೆಲೆಗಳು ಏರಿದರೆ ಇಲ್ಲಿಯೂ ಇಂಧನ ಬೆಲೆಗಳು ಏರಿಕೆಯಾಗುತ್ತವೆ. ಜನರಿಗೆ ಇದು ಅರ್ಥವಾಗುತ್ತಿಲ್ಲ,ಅವರು ತಮ್ಮ ಇತರ ವೆಚ್ಚಗಳನ್ನು ತಗ್ಗಿಸಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಿಣವಾ ಹೇಳಿದರು.

ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು,ಬಿಜೆಪಿ ನಾಯಕರ ಇಂತಹ ಹೇಳಿಕೆಗಳು ಅವರೆಷ್ಟು ದುರಂಹಕಾರಿಗಳಾಗಿದ್ದಾರೆ ಮತ್ತು ಜನರ ಅಗತ್ಯಗಳಿಗೆ ಅವರು ಸ್ಪಂದಿಸುತ್ತಿಲ್ಲ ಎನ್ನುವುದನ್ನು ತೋರಿಸುತ್ತಿವೆ. ಜನರು ಸಂಕಷ್ಟಗಳಿಂದ ನರಳುತ್ತಿರುವಾಗ ಅವರು ಇಂತಹ ಅರ್ಥಹೀನ ಹೇಳಿಕೆಗಳಿಂದ ಇನ್ನಷ್ಟು ಹದಗೆಡಿಸುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News