ನ.23ಕ್ಕೆ ದುಬೈನಲ್ಲಿ ವಿಶ್ವ ತುಳು ಸಮ್ಮೇಳನ

Update: 2018-09-10 14:35 GMT

ಬೆಂಗಳೂರು, ಸೆ. 10: ಅಖಿಲ ಭಾರತ ತುಳು ಒಕ್ಕೂಟ ಕುಡ್ಲದ ಸಹಭಾಗಿತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೊಲ್ಲಿ ರಾಷ್ಟ್ರಗಳ ಸಹಯೋಗದೊಂದಿಗೆ ನ.23ರಿಂದ ಎರಡು ದಿನಗಳವರೆಗೂ ವಿಶ್ವ ತುಳು ಸಮ್ಮೇಳನ ದುಬೈನ ಆಲ್‌ನಸಾರ್ ಲೀಸರ್ ಲ್ಯಾಂಡ್ ಐಸ್‌ರಿಂಗ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ತುಳು ಒಕ್ಕೂಟ ತಿಳಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಸಮ್ಮೇಳನ ನಡೆಯಲ್ಲಿದ್ದು, ಅಧ್ಯಕ್ಷತೆಯನ್ನು ಬಿ.ಆರ್.ಶೆಟ್ಟಿ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಕೊಲ್ಲಿ ರಾಷ್ಟ್ರದಲ್ಲಿರುವ ಸಮಸ್ತ ತುಳುವರನ್ನು ಒಗ್ಗೂಡಿಸಿ, ತುಳು ಭಾಷೆ, ಸಂಸ್ಕೃತಿ, ತುಳುವರ ಆಚಾರ-ವಿಚಾರಗಳನ್ನು ನೆನಪಿಸುವ ಮೂಲಕ ವಿದೇಶದಲ್ಲಿರುವ ತುಳುವರನ್ನು ಸಂಘಟಿಸಲಾಗುವುದು ಹಾಗೂ ತುಳು ಭಾಷೆ ಸಾಂಸ್ಕೃತಿಕ ಸ್ಪರ್ಧೆಗಳು, ಯಕ್ಷಗಾನ, ನಾಟಕ ಮುಂತಾದ ಕಾರ್ಯಕ್ರಮಗಳು ವಿದೇಶಿ ತುಳುವರ ಮನ ತಣಿಸಲಿವೆ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 99005 02088 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News