ಪಾಕ್: ಭವ್ಯ ಕಾರು, ಸ್ಮಾರ್ಟ್‌ಫೋನ್, ಚೀಸ್ ಆಮದು ನಿಷೇಧ?

Update: 2018-09-10 16:00 GMT

ಇಸ್ಲಾಮಾಬಾದ್, ಸೆ. 10: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಸಾಲ ಮರುಪಾವತಿಗೆ ವಿನಾಯಿತಿ ಕೇಳುವುದನ್ನು ತಪ್ಪಿಸುವ ಕ್ರಮಗಳ ಬಗ್ಗೆ ಚಿಂತನೆ ನಡೆಸಿದೆ.

ಭವ್ಯ ಕಾರುಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಚೀಸ್ ಆಮದನ್ನು ನಿಷೇಧಿಸುವ ಬಗ್ಗೆ ದೇಶದ ಆರ್ಥಿಕ ಸಲಹಾಕಾರರು ಚರ್ಚಿಸುತ್ತಿದ್ದಾರೆ ಎಂದು ಹಿರಿಯ ಸರಕಾರಿ ಸಲಹಾಕಾರರೊಬ್ಬರು ತಿಳಿಸಿದರು.

 ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲವಾದರೂ, ಪಾಕಿಸ್ತಾನದ ಹಿಗ್ಗುತ್ತಿರುವ ಚಾಲ್ತಿ ಖಾತೆ ಕೊರತೆಯನ್ನು ನಿಭಾಯಿಸಲು ನೂತನ ಸರಕಾರ ಕಟಿಬದ್ಧವಾಗಿರುವುದನ್ನು ಈ ಅಸಾಂಪ್ರದಾಯಿಕ ಕ್ರಮಗಳು ಸೂಚಿಸುತ್ತಿವೆ.

ನೂತನವಾಗಿ ರಚನೆಗೊಂಡಿರುವ ಆರ್ಥಿಕ ಸಲಹಾ ಮಂಡಳಿ (ಇಎಸಿ)ಯು ಕಳೆದ ವಾರ ಹಣಕಾಸು ಸಚಿವ ಅಸಾದ್ ಉಮರ್ ಅಧ್ಯಕ್ಷತೆಯಲ್ಲಿ ಮೊದಲ ಅಧಿವೇಶನ ನಡೆಸಿತು.

ರಫ್ತು ಕೊರತೆ ಮತ್ತು ಆಮದಿನಲ್ಲಿ ಆಗಿರುವ ಏರಿಕೆಯಿಂದಾಗಿ ಪಾಕಿಸ್ತಾನದ ಆರ್ಥಿಕತೆಯಲ್ಲಿ ಡಾಲರ್‌ನ ಕೊರತೆ ತಲೆದೋರಿದೆ. ಇದು ಸ್ಥಳೀಯ ಕರೆನ್ಸಿಯ ಮೇಲೆ ಒತ್ತಡ ಹೇರಿದೆ ಹಾಗೂ ವಿದೇಶಿ ಕರೆನ್ಸಿ ಮೀಸಲಿನ ಕುಸಿತಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News