ಹುದೈದಾದಲ್ಲಿ ಭೀಕರ ಕಾಳಗ: ಕನಿಷ್ಠ 84 ಸಾವು

Update: 2018-09-10 16:44 GMT

ಖೋಖ (ಯಮನ್), ಸೆ. 10: ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಶಾಂತಿ ಮಾತುಕತೆ ಮುರಿದು ಬಿದ್ದ ಬಳಿಕ, ಯಮನ್‌ನ ಕೆಂಪು ಸಮುದ್ರ ಬಂದರು ನಗರ ಹುದೈದಾ ಸುತ್ತಮುತ್ತ ನಡೆದ ಕಾಳಗ ಮತ್ತು ವಾಯು ದಾಳಿಗಳಲ್ಲಿ 84 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ರವಿವಾರ ತಿಳಿಸಿವೆ.

ಶನಿವಾರ ಮಾತುಕತೆ ರದ್ದುಗೊಂಡ ಬಳಿಕ, ಹೌದಿದ ಬಂಡುಕೋರರ ನಿಯಂತ್ರಣದಲ್ಲಿರುವ ಹುದೈದಾ ಪ್ರಾಂತದಲ್ಲಿ ನಡೆದ ಕಾಳಗದಲ್ಲಿ 11 ಸೈನಿಕರು ಮತ್ತು 73 ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಡಝನ್‌ಗಟ್ಟಳೆ ಬಂಡುಕೋರರು ಹಾಗೂ ಕನಿಷ್ಠ 17 ಸೈನಿಕರು ಗಾಯಗೊಂಡಿದ್ದಾರೆ.

ಆಹಾರ ಮತ್ತು ನೆರವು ಸೇರಿದಂತೆ ಯಮನ್‌ನ ಸುಮಾರು 70 ಶೇಕಡ ಆಮದುಗಳ ಪ್ರವೇಶ ದ್ವಾರವಾಗಿರುವ ಹುದೈದಾ ರಾಜ್ಯವನ್ನು ವಶಪಡಿಸಿಕೊಳ್ಳಲು ಸೌದಿ ಅರೇಬಿಯ ಮತ್ತು ಯುಎಇಗಳನ್ನೊಳಗೊಂಡ ಅರಬ್ ಮಿತ್ರಕೂಟ ನಿರಾಂತರ ವಾಯುದಾಳಿಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News