ಚೌತಿ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶವನ್ನೇ ಬಳಸಿ: ಡಿಸಿಎಂ ಡಾ.ಜಿ.ಪರಮೇಶ್ವರ್ ಮನವಿ

Update: 2018-09-11 07:44 GMT

ಬೆಂಗಳೂರು, ಸೆ.11: ಚೌತಿ ಹಬ್ಬದ ಸಂದರ್ಭದಲ್ಲಿ ವಿಷಯುಕ್ತ ಮತ್ತು ನೀರಿನಲ್ಲಿ ಕರಗದ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಲಾಗುವ ಪ್ಲಾಸ್ಟರ್ ಆಪ್ ಪ್ಯಾರಿಸ್(ಪಿಒಪಿ) ಗಣೇಶ ಮೂರ್ತಿಗಳನ್ನು ಬಳಸಬಾರದೆಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಾರ್ವಜನಿಕರಲ್ಲಿ ‌ಮನವಿ ಮಾಡಿದ್ದಾರೆ. 

ಪಿಒಪಿ ಮೂರ್ತಿಗಳ  ಬಳಕೆಯಿಂದ ಜಲಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಸಾಂಪ್ರದಾಯಿಕವಾಗಿ ಮಣ್ಣಿನಿಂದ ಮಾಡಲಾಗುವ ಯಾವುದೇ ಬಣ್ಣ ಬಳಿಯದ ಗಣೇಶ ಮೂರ್ತಿಗಳನ್ನು ಪೂಜೆಗೆ ಬಳಸುವ ಮೂಲಕ ಜಲಮೂಲಗಳ ರಕ್ಷಣೆ ಮಾಡಬೇಕೆಂದು ‌ಕರೆ ನೀಡಿರುವ ಉಪ ಮುಖ್ಯಮಂತ್ರಿ, "ನೀರು ಮನುಷ್ಯನ ಜೀವನಕ್ಕೆ ಅತ್ಯಮೂಲ್ಯ ಸಂಪನ್ಮೂಲ"ವಾಗಿದ್ದು ಅದನ್ನು ಉಳಿಸಿ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News