ಜಾರಿ ನಿರ್ದೇಶನಾಲಯದ ಆರೋಪದಲ್ಲಿ ಹುರುಳಿಲ್ಲ: ಚೋಕ್ಸಿ

Update: 2018-09-11 09:36 GMT

ಹೊಸದಿಲ್ಲಿ, ಸೆ.11: ‘‘ನನ್ನ ವಿರುದ್ಧ ಇಡಿ(ಜಾರಿ ನಿರ್ದೇಶನಾಲಯ)ಮಾಡಿರುವ ಆರೋಪ ತಪ್ಪು ಹಾಗೂ ಹುರುಳಿಲ್ಲದ್ದು. ಇಡಿ ನನ್ನ ಆಸ್ತಿ-ಪಾಸ್ತಿಯನ್ನು ಅಕ್ರಮವಾಗಿ ಜಪ್ತಿ ಮಾಡಿದೆ’’ ಎಂದು ವಿದೇಶಕ್ಕೆ ಪರಾರಿಯಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಸಿಬಿ)ಹಗರಣದ ಆರೋಪಿ ಮೆಹುಲ್ ಚೋಕ್ಸಿ ಆರೋಪಿಸಿದ್ದಾರೆ.

ಆ್ಯಂಟಿಗುವಾದಲ್ಲಿರುವ ಚೋಕ್ಸಿ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿರುವ ವಿಡಿಯೋ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

 ‘‘ಇಡಿ ನನ್ನ ಆಸ್ತಿಯನ್ನು ಅಕ್ರಮವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಫೆ.20 ರಂದು ನಾನು ಪಾಸ್‌ಪೋರ್ಸ್ ಕಚೇರಿಯಿಂದ ಇ-ಮೇಲ್ ಸ್ವೀಕರಿಸಿದ್ದೆ. ಅದರಲ್ಲಿ ಭಾರತದಲ್ಲಿ ನನಗೆ ಜೀವಬೆದರಿಕೆ ಇರುವ ಕಾರಣ ಪಾಸ್‌ಪೋರ್ಟ್‌ನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಲಾಗಿತ್ತು. ಆಗ ನಾನು ಮುಂಬೈನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಇ-ಮೇಲ್ ಮಾಡಿ ನನ್ನ ಪಾಸ್‌ಪೋರ್ಟ್ ಮೇಲಿನ ಅಮಾನತನ್ನು ರದ್ದುಪಡಿಸುವಂತೆ ಕೋರಿದ್ದೆ. ಆದರೆ ಮುಂಬೈ ಕಚೇರಿಯಿಂದ ನನಗೆ ಉತ್ತರ ಬಂದಿಲ್ಲ. ನನಗೆ ಭಾರತದಲ್ಲಿ ಜೀವಬೆದರಿಕೆ ಇರುವುದು ಏತಕ್ಕೆ ಎಂದು ಸ್ಪಷ್ಟಪಡಿಸಿಲ್ಲ’’ ಎಂದು ಚೋಕ್ಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News