ಪರಿಸರ ಸ್ನೇಹಿ ಗಣೇಶನೆ ಎಲ್ಲರಿಗೂ ಪ್ರೇರಣೆಯಾಗಲಿ: ರಾಜ್‌ ಮೋಹನ್‌ರಾಜ್

Update: 2018-09-11 13:37 GMT

ಬೆಂಗಳೂರು, ಸೆ.11: ನರಗದೆಲ್ಲೆಡೆ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಲು ಪ್ರೇರಣೆ ಸಿಗಲಿ ಎಂಬ ಕಾರಣಕ್ಕಾಗಿ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 50 ಟನ್ ಕಬ್ಬಿನಲ್ಲಿ ಮಾಡಿದ ಪರಿಸರ ಸ್ನೇಹಿ ಗಣಪತಿ ಕೂರಿಸಲಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್‌ಮೋಹನ್‌ರಾಜ್ ತಿಳಿಸಿದರು.

ದೇವರನ್ನು ಪೂಜಿಸಲೆಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಅದರಿಂದ ಪರಿಸರಕ್ಕೆ ಯಾವುದೆ ರೀತಿಯ ತೊಂದರೆಯಾಗಬಾರದು. ಆದರೆ, ಪಿಒಪಿ ಗಣೇಶ ಮೂರ್ತಿಯನ್ನು ಕೂರಿಸುವುದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಲಿದೆ. ಹೀಗಾಗಿ ಕಬ್ಬಿನಲ್ಲಿ ಮಾಡಿದ ಪರಿಸರ ಗಣೇಶ ಮೂರ್ತಿಯನ್ನು ಕೂರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪರಿಸರಸ್ನೇಹಿ ಗಣೇಶನನ್ನು ನೋಡಲು ಬರುವ ಭಕ್ತರಿಗೆ ವಿಶೇಷವಾಗಿ ಏನಾದರು ನೀಡಬೇಕೆಂಬ ಉದ್ದೇಶದಿಂದ 4 ಸಾವಿರ ಕೆಜಿ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಲಾಗಿದೆ. ಈ ಲಾಡು ನಿರ್ಮಿಸಲು 1000 ಕೆಜಿ ಕಡಲೆ ಹಿಟ್ಟು, 2000 ಕೆಜಿ ಸಕ್ಕರೆ, 700 ಕೆಜಿ ಸನ್ ಪ್ಯೂರ್ ಎಣ್ಣೆ, 300 ಕೆಜಿ ತುಪ್ಪ, 50ಕೆಜಿ ಗೋಡಂಬಿ, 50ಕೆಜಿ ಒಣ ದ್ರಾಕ್ಷಿ, 5ಕೆಜಿ ಏಲಕ್ಕಿಯನ್ನು ಬಳಸಿ ತಯಾರಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News