ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆ.25ಕ್ಕೆ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಬಂದ್

Update: 2018-09-11 16:49 GMT

ಬೆಂಗಳೂರು, ಸೆ.11: ಅನ್ನಭಾಗ್ಯ ಯೋಜನೆಯಡಿ ಮೂಟೆ ಹೊರುವ ಕಾರ್ಮಿಕರ ಕೂಲಿ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸೆ.25ರಿಂದ ಅಕ್ಕಿ ಸಾಗಾಣಿಕೆ ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ಶ್ರಮಿಕ ಶಕ್ತಿ ಕರೆ ನೀಡಿದೆ.

ಈ ಕುರಿತು ನಗರದ ಪ್ರೆಸ್ ನಗರದ ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆ ಅಧ್ಯಕ್ಷ ವರದ ರಾಜೇಂದ್ರ, ಅಂದು ಬೆಳಗ್ಗೆ 10:30ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ಕೆಎಫ್‌ಸಿಎಸ್‌ಸಿ, ಟಿಎಪಿಸಿಎಂಎಸ್ ಮತ್ತು ರಾಜ್ಯ ಉಗ್ರಾಣ ನಿಗಮ ಹಮಾಲಿ ಕಾರ್ಮಿಕರು ನಿರಂತರವಾಗಿ ಎದುರಿಸುತ್ತಿರುವ ಕಿರುಕುಳಕ್ಕೆ ಶಾಶ್ವತ ಪರಿಹಾರ ಹಾಗೂ ಕೂಲಿ ಹೆಚ್ಚಿಸಿ, ಇಎಸ್‌ಐ-ಪಿಎಫ್ ಜಾರಿಯ ಉಸ್ತುವಾರಿ ಮಾಡಲು ಅಧಿಕಾರಿ ನೇಮಿಸಿ ಎಂದು ಒತ್ತಾಯಿಸಿದರು.

ಕೂಲಿಯನ್ನು ಕಾರ್ಮಿಕರಿಗೆ ನೇರವಾಗಿ ಪಾವತಿಸಬೇಕು. ಗ್ರಾಚುಯಿಟಿ ಕಾಯಿದೆ ಜಾರಿಗೊಳಿಸಬೇಕು. ಮಹಾರಾಷ್ಟ್ರ ಮಾಥಾಡಿ ಕಲ್ಯಾಣ ಮಂಡಳಿ ಕಾಯಿದೆ 1969 ರ ಮಾದರಿಯಲ್ಲಿ ಕರ್ನಾಟಕ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News