ಭಾರತ ಸಂಜಾತ ಮಹಿಳೆಗೆ ಅಮೆರಿಕದ ತಾಂತ್ರಿಕ ಪ್ರಶಸ್ತಿ

Update: 2018-09-11 16:53 GMT

ವಾಶಿಂಗ್ಟನ್, ಸೆ. 11: ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ಸ್ಮಾರ್ಟ್‌ಫೋನ್ ಮೂಲಕ ಪತ್ತೆಹಚ್ಚುವ ನಿಟ್ಟಿನಲ್ಲಿ ಮಾಡಿದ ಸಂಶೋಧನೆಗಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತ ಸಂಜಾತ ಮಹಿಳೆ ರಾಜಲಕ್ಷ್ಮಿ ನಂದಕುಮಾರ್‌ಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ನೀಡಲಾಗಿದೆ.

ವಾಶಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ನಂದಕುಮಾರ್, ಸಾಮಾನ್ಯ ಸ್ಮಾರ್ಟ್‌ಫೋನೊಂದನ್ನು ಸೋನಾರ್ ಸಿಸ್ಟಮ್ ಆಗಿ ಪರಿವರ್ತನೆ ತಂತ್ರಜ್ಞಾನವೊಂದನ್ನು ಸೃಷ್ಟಿಸಿದ್ದಾರೆ. ಸೋನಾರ್ ಸಿಸ್ಟಮ್ ಆಗಿ ಪರಿವರ್ತನೆಗೊಂಡ ಸ್ಮಾರ್ಟ್‌ಫೋನ್, ಚಲನೆ ಮತ್ತು ಉಸಿರಾಟದಂಥ ದೈಹಿಕ ಚಟುವಟಿಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಇದಕ್ಕಾಗಿ ಸ್ಮಾರ್ಟ್‌ಫೋನ್ ಜೊತೆ ಭೌತಿಕ ಸಂಪರ್ಕ ಹೊಂದಬೇಕಾಗಿಲ್ಲ.

2018ರ ‘ಮಾರ್ಕೊನಿ ಸೊಸೈಟಿ ಪೌಲ್ ಬರನ್ ಯಂಗ್ ಸ್ಕೋಲರ್’ ಪ್ರಶಸ್ತಿಯನ್ನು ನೀಡಲಾಗಿದೆ.

ಬಾವಲಿಗಳಿಂದ ಪ್ರೇರಣೆ!

ರಾಜಲಕ್ಷ್ಮಿಯ ಸಂಶೋಧನೆಗೆ ಬಾವಲಿಗಳೇ ಪ್ರೇರಣೆ. ಬಾವಲಿಗಳು ರಾತ್ರಿಯಲ್ಲಿ ಸಂಚರಿಸಲು ಸೋನಾರ್ ತಂತ್ರಜ್ಞಾನವನ್ನು ಬಳಸುತ್ತವೆ. ಅವುಗಳು ಹಾರುವಾಗ ಸೋನಾರ್ ತರಂಗಗಳನ್ನು ಸುತ್ತಲೂ ಕಳುಹಿಸುತ್ತವೆ ಹಾಗೂ ಪ್ರತಿಫಲನಗೊಳ್ಳುವ ತರಂಗಗಳ ಮೂಲಕ ಅಡೆತಡೆಗಳನ್ನು ಗುರುತಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News