ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಹುಡುಗ ಈಗ ಐಪಿಎಸ್ ಅಧಿಕಾರಿ

Update: 2018-09-12 10:34 GMT

ಬೆಂಗಳೂರು, ಸೆ. 12: ಶಾಲಾ ದಿನಗಳಲ್ಲಿ ಯಾವತ್ತೂ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಮಿಥುನ್ ಕುಮಾರ್ ಜಿ ಕೆ ಎಂಬಾತ ಮುಂದೆ ಐಪಿಎಸ್ ಅಧಿಕಾರಿಯಾಗಿ ಎಲ್ಲರಿಗೂ ಹೆಮ್ಮೆಯುಂಟು ಮಾಡುತ್ತಾನೆಂದು ಯಾರೂ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ ಕರ್ನಾಟಕದ ಈ ಯುವಕ ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ.

ನಾಲ್ಕು ವಿಫಲ ಯತ್ನಗಳ ನಂತರ 2016ರಲ್ಲಿ ಅವರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರಲ್ಲದೆ 130ನೇ ರ್ಯಾಂಕನ್ನೂ ಗಳಿಸಿದ್ದಾರೆ.

ಅವರಿಗೆ ಐಎಎಸ್ ಅಧಿಕಾರಿಯೂ ಆಗಬಹುದಾಗಿದ್ದರೂ ಅವರು ಯಾವತ್ತೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡವರಾಗಿದ್ದರು ಹಾಗೂ ತಮ್ಮ ಕನಸನ್ನು ತಮ್ಮ ಕಠಿಣ ಶ್ರಮದಿಂದ ನನಸಾಗಿಸಿದ್ದಾರೆ.

ಕುಟುಂಬದಲ್ಲಿ ಹಿರಿಯ ಮಗನಾಗಿದ್ದ ಆವರು ಪದವಿ ಪೂರೈಸಿದ ಕೂಡಲೇ ಕುಟುಂಬವನ್ನು ಸಲಹುವ ಉದ್ದೇಶದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆದರೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಅವರು ಕೈಬಿಟ್ಟಿರಲಿಲ್ಲ. ಅವರ ಈ ಆಸೆಗೆ ನೀರೆರೆದು ಪೋಷಿಸಿದವರು ಅವರ ತಂದೆ. ಮೂರು ವರ್ಷ ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿದ ಅವರು ತಮ್ಮ ಸೋದರ ಕುಟುಂಬದ ಜವಾಬ್ದಾರಿ ವಹಿಸಿದಾಗ ಉದ್ಯೋಗ ತೊರೆದು ಯುಪಿಎಸ್‍ಸಿ ಪರೀಕ್ಷೆಯತ್ತ ಗಮನ ಹರಿಸಿದ್ದರು.

ಪೊಲೀಸ್ ಸಮವಸ್ತ್ರ ಅವರನ್ನು ಸದಾ ಆಕರ್ಷಿಸುತ್ತಿತ್ತು. ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೋಡಿದಾಗಲೆಲ್ಲಾ ತಾನೂ ಅವರಂತೆಯೇ ಆಗಬೇಕೆಂಬ ಕನಸನ್ನು ಹೊತ್ತುಕೊಂಡಿದ್ದ ಮಿಥುನ್ ತಮ್ಮ ಕನಸಿನಂತೆಯೇ ಪೊಲೀಸ್ ಅಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News