ಲೋಕಸಭಾ ನೀತಿಸಮಿತಿಯ ಅಧ್ಯಕ್ಷರಾಗಿ ಎಲ್.ಕೆ.ಆಡ್ವಾಣಿ ಮರುನಾಮಕರಣ

Update: 2018-09-12 14:01 GMT

ಹೊಸದಿಲ್ಲಿ,ಸೆ.12: ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಲೋಕಸಭೆಯ ನೀತಿಸಮಿತಿಯ ಅಧ್ಯಕ್ಷರನ್ನಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮರುನಾಮಕರಣಗೊಳಿಸಿದ್ದಾರೆ. ಸಮಿತಿಯು ಸಂಸತ್ ಸದಸ್ಯರ ಅನೀತಿಯುತ ವರ್ತನೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುತ್ತದೆ. ಅಗತ್ಯವಾದರೆ ನೈತಿಕತೆ ಮತ್ತು ಸಂಸದರ ಅನೀತಿಯುತ ವರ್ತನೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಯಂಪ್ರೇರಿತ ತನಿಖೆಯನ್ನು ನಡೆಸುವ ಮತ್ತು ಸೂಕ್ತ ಕ್ರಮಗಳಿಗೆ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನೂ ಸಮಿತಿಯು ಹೊಂದಿದೆ.

ಪಿ.ಕರುಣಾಕರನ್ ಅವರನ್ನು ಸದನದ ಬೈಠಕ್‌ನಲ್ಲಿ ಸದಸ್ಯರ ಗೈರುಹಾಜರಿ ಕುರಿತ ಸಮಿತಿಯ ಅಧ್ಯಕ್ಷರನ್ನಾಗಿ ಮರುನಾಮಕರಣಗೊಳಿಸಲಾಗಿದೆ. ರಮೇಶ ಪೋಖ್ರಿಯಾಲ್ ನಿಶಾಂಕ್ ಅವರು ಸರಕಾರಿ ಭರವಸೆಗಳ ಕುರಿತ ಸಮಿತಿಯ ಅಧಕ್ಷರಾಗಲಿದ್ದಾರೆ.

ಸದನದಲ್ಲಿ ಮಂಡಿಸಲಾಗುವ ದಾಖಲೆಗಳ ಕುರಿತು ಸಮಿತಿಯ ಅಧ್ಯಕ್ಷರನ್ನಾಗಿ ಚಂದ್ರಕಾಂತ ಬಿ.ಖೈರೆ ಅವರನ್ನು ಮರುನಾಮಕರಣಗೊಳಿಸಲಾಗಿದೆ. ದಿಲೀಪಕುಮಾರ ಮನ್ಸುಖಲಾಲ್ ಗಾಂಧಿ ಅವರು ಅಧೀನ ಶಾಸನಗಳ ಕುರಿತ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ ಎಂದು ಲೋಕಸಭೆಯ ಪ್ರಕಟಣೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News