ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೊರಿಂದ ಅಧಿಕಾರ ಹಸ್ತಾಂತರ

Update: 2018-09-15 08:45 GMT

ಕೊಟ್ಟಾಯಂ, ಸೆ.15: ಕೇರಳದ ಕ್ರೈಸ್ತ ಸಂನ್ಯಾಸಿನಿ ಮೇಲೆ ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ಶನಿವಾರ ಜಲಂಧರ್ ಡಯಾಸಿಸ್ ಆಡಳಿತದ ಅಧಿಕಾರವನ್ನು ಫಾ.ಮ್ಯಾಥ್ಯೂ ಕೊಕ್ಕಂಡಮ್‌ಗೆ ಹಸ್ತಾಂತರಿಸುತ್ತಿರುವುದಾಗಿ ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

  ‘‘ನನ್ನ ಅನುಪಸ್ಥಿತಿಯಲ್ಲಿ ಜಲಂಧರ್ ಡಯಾಸಿಸ್ ಆಡಳಿತವನ್ನು ಮ್ಯಾಥ್ಯೂ ಕೊಕ್ಕಂಡಮ್ ನೋಡಿಕೊಳ್ಳಲಿದ್ದಾರೆ. ನಾನು ಡಯಾಸಿಸ್‌ನಿಂದ ಹೊರಗೆ ಹೋದಾಗ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ. ನನಗೆ ನಿರಂತರವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆನು ’’ ಎಂದು ಸುತ್ತೋಲೆಯಲ್ಲಿ ಬಿಷಪ್ ಫ್ರಾಂಕೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News