ಪ್ರಶ್ನೆಗಳನ್ನು ಕೇಳಲು ಹೆದರಬೇಡಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

Update: 2018-09-18 08:55 GMT

ಹೊಸದಿಲ್ಲಿ, ಸೆ.18: ವಾರಣಾಸಿಯ ನರೌರ್ ನ ಸರಕಾರಿ ಶಾಲೆಯೊಂದರಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿದ ಪ್ರಧಾನಿ ಮೋದಿ, ಪ್ರಶ್ನೆಗಳನ್ನು ಕೇಳಲು ಯಾವತ್ತೂ ಹೆದರಬಾರದು. ಏಕೆಂದರೆ ಪ್ರಶ್ನೆ ಕೇಳುವುದು ಕಲಿಕೆಯ ಭಾಗವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು,

“ವಿದ್ಯಾರ್ಥಿಗಳು ಪ್ರಶ್ನೆ ಕೇಳುವುದು ಅತೀ ಮುಖ್ಯವಾಗಿದೆ. ಪ್ರಶ್ನೆ ಕೇಳಲು ಯಾವತ್ತೂ ಹೆದರಬೇಡಿ. ಇದು ಕಲಿಕೆಯಲ್ಲಿ ಅತ್ಯಂತ ಪ್ರಮುಖ ವಿಷಯ. ಯಾವುದೇ ವಿಷಯದ ಬಗ್ಗೆ ಸಂದೇಹಗಳಿದ್ದರೆ ಶಿಕ್ಷಕರಲ್ಲಿ ಪ್ರಶ್ನಿಸಿ” ಎಂದವರು ಹೇಳಿದರು.

“ವಿದ್ಯಾರ್ಥಿಗಳು ಕ್ರೀಡೆಗಳಿಗೂ ಮಹತ್ವ ನೀಡಬೇಕು. ಕ್ರೀಡೆಯು ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಆಟವಾಡಿ. ಇಷ್ಟೇ ಅಲ್ಲದೆ ಕೆಲ ಕೌಶಲ್ಯಗಳನ್ನೂ ಕಲಿಯುವುದೂ ಅಗತ್ಯವಾಗಿದೆ. ಏಕೆಂದರೆ ಅದು ಜೀವನದುದ್ದಕ್ಕೂ ಸಹಕಾರಿಯಾಗಲಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News