ಪ್ರಧಾನಿ ಮೋದಿ ಕೋಟ್ಯಾಧಿಪತಿ: ಒಂದು ಬ್ಯಾಂಕ್ ಖಾತೆಯಲ್ಲಿ 1 ಕೋಟಿ ರೂ.

Update: 2018-09-19 14:38 GMT

ಹೊಸದಿಲ್ಲಿ, ಸೆ.19: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಟ್ಟು ಆಸ್ತಿಯ ಮೊತ್ತ 2 ಕೋಟಿ ರೂ.ಗೂ ಹೆಚ್ಚು. ಆದರೆ ಅವರ ಬಳಿ ಸ್ವಂತ ಕಾರು ಅಥವಾ ದ್ವಿಚಕ್ರ ವಾಹನಗಳಿಲ್ಲ ಎಂದು ಪ್ರಧಾನ ಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ಆಸ್ತಿ ವಿವರದಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿಯವರ ಬಳಿ 48,944 ರೂ. ಇದೆ. ಎಸ್‌ಬಿಐ ಗಾಂಧಿನಗರ ಶಾಖೆಯಲ್ಲಿರುವ ಖಾತೆಯಲ್ಲಿ 11,29,690 ರೂ. ಠೇವಣಿ ಇದೆ. ಇನ್ನೊಂದು ಎಸ್‌ಬಿಐ ಖಾತೆಯಲ್ಲಿ 1,07,96,288 ರೂ. ಮೊತ್ತ ಜಮೆಯಾಗಿದೆ. ಪ್ರಧಾನಿಯವರ ಹೂಡಿಕೆಯಲ್ಲಿ ತೆರಿಗೆ ಉಳಿಸುವ ಎಲ್ ಆ್ಯಂಡ್ ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್ (20,00 ರೂ. ಮೊತ್ತ), 5,18,235 ರೂ. ಮೊತ್ತದ ರಾಷ್ಟ್ರೀಯ ಉಳಿತಾಯ ಪತ್ರ, 1,59,281 ರೂ. ಮೊತ್ತದ ಎಲ್‌ಐಸಿ ಪಾಲಿಸಿ ಸೇರಿವೆ. ಅಲ್ಲದೆ 1,38,060 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಕೇವಲ ಒಂದು ಆಸ್ತಿ ಹೊಂದಿದ್ದಾರೆ.

ಗಾಂಧೀನಗರದಲ್ಲಿರುವ ವಸತಿ ಸಮುಚ್ಛಯದಲ್ಲಿ ಮೋದಿಯವರಿಗೆ ನಾಲ್ಕನೇ ಒಂದಂಶದಷ್ಟು ಪಾಲು ಇದೆ. ಈ ಕಟ್ಟಡವನ್ನು 2002ರಲ್ಲಿ 1,30,488 ರೂ.ಗೆ ಖರೀದಿಸಿದ್ದು ಈಗ ಇದರ ಮೌಲ್ಯ 1 ಕೋಟಿ ರೂ. ಆಗಿದೆ ಎಂದು ಆಸ್ತಿ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News