ಬೆಂಗಳೂರು ಕೃಷಿ ವಿವಿ ಕುಲಪತಿಯಾಗಿ ಡಾ.ರಾಜೇಂದ್ರ ಪ್ರಸಾದ್ ನೇಮಕ

Update: 2018-09-19 15:29 GMT

ಬೆಂಗಳೂರು, ಸೆ.19: ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಡಾ.ಎಸ್.ರಾಜೇಂದ್ರ ಪ್ರಸಾದ್ ಹಾಗೂ ಧಾರವಾಡ ಕೃಷಿ ವಿವಿಗೆ ಡಾ.ಎಂ.ಬಿ.ಛೆಟ್ಟಿ ಅವರನ್ನು ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.

ಡಾ.ಎಸ್.ರಾಜೇಂದ್ರಪ್ರಸಾದ್ ಅವರನ್ನು ಮುಂದಿನ 4 ವರ್ಷದ ಅವಧಿಗೆ ನೇಮಕ ಮಾಡಿ ಆದೇಶಿಸಲಾಗಿದೆ. ರಾಜೇಂದ್ರಪ್ರಸಾದ್ ಮದ್ದೂರು ತಾಲೂಕು ಅಣ್ಣೂರು ಗ್ರಾಮದವರು. 7 ಪಿಎಚ್‌ಡಿ, 14 ಎಂಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಕೃಷಿ ವಿವಿ ಇತಿಹಾಸದಲ್ಲಿಯೆ ಪ್ರಥಮ ಬಾರಿಗೆ ಇವರು ವಿದ್ಯಾರ್ಥಿ ಪ್ರಧಾನಮಂತ್ರಿ ಫೆಲೊಶಿಪ್ ಪಡೆದವರಾಗಿದ್ದರು. ಥೈಲ್ಯಾಂಡ್, ನೆದರ್ಲೆಂಡ್, ಫಿಲಿಪೈನ್ಸ್ ದೇಶಗಳಲ್ಲಿ ಬೀಜೊತ್ಪಾದನೆ ಕುರಿತು ಫೆಲೊಶಿಪ್ ಉನ್ನತ ತರಬೇತಿ ಪಡೆದಿದ್ದಾರೆ.

ಭಾರತಿಯ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ಭಾರತಿಯ ಬೀಜ ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಕೃಷಿ ಕಾಲೇಜಿನ ಡೀನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News