ಕೇಂದ್ರ ಸರಕಾರ ನಿಷೇಧಿಸಿದ ಔಷಧಗಳು ಯಾವುದು ಎಂದು ತಿಳಿಯುವುದು ಹೇಗೆ?: ಇಲ್ಲಿದೆ ಮಾಹಿತಿ

Update: 2018-09-19 16:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.19: ಕೇಂದ್ರ ಸರಕಾರವು ಔಷಧ ಮತ್ತು ಕಾಂತಿವರ್ಧಕಗಳ ಅಧಿನಿಯಮದಂತೆ 328 ವಿವಿಧ ಸಂಯೋಜಿತ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸೆ.7 ರಿಂದ ತಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಿದೆ.

ಸದರಿ ನಿಷೇಧಿತ ಔಷಧಿಗಳ ವಿವರಗಳು ಔಷಧ ನಿಯಂತ್ರಣ ಇಲಾಖೆಯ ಅಂತಾರ್ಜಾಲ http://drugs.kar.nic.in ನಲ್ಲಿ ಲಭ್ಯವಿರುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಔಷಧ ತಯಾರಕರು 328 ವಿವಿಧ ಔಷಧಗಳ ತಯಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಈ ಹಿಂದೆ ತಯಾರಿಸಿದ ಸದರಿ ಔಷಧಗಳನ್ನು ವಿತರಣಾ ಸರಪಳಿಯಿಂದ ಈ ಕೂಡಲೇ ಹಿಂಪಡೆಯುವಂತೆ ಸೂಚಿಸಲಾಗಿದೆ.

ಎಲ್ಲ ಔಷಧ ವ್ಯಾಪಾರಿಗಳು ಈ 328 ವಿವಿಧ ಔಷಧಗಳ ಮಾರಾಟವನ್ನು ತಡೆಹಿಡಿಯಲು ಮತ್ತು ಅವರ ಕಾರ್ಯವ್ಯಾಪ್ತಿಯ ಔಷಧ ಪರೀಕ್ಷಕರು/ಸಹಾಯಕ ಔಷಧ ನಿಯಂತ್ರಕರು/ಉಪ ಔಷಧ ನಿಯಂತ್ರಕರವರೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಹಾಗೂ ವೈದ್ಯರು, ನರ್ಸಿಂಗ್ ಹೋಮ್‌ಗಳು ಮತ್ತು ಆಸ್ಪತ್ರೆಗಳು ಸದರಿ ನಿಷೇಧಿತ ಔಷಧಗಳಿಗೆ ಸಲಹಾ ಚೀಟಿಯನ್ನು ನೀಡುವುದು ಮತ್ತು ಉಪಯೋಗಿಸುವದನ್ನು ಈ ಕೂಡಲೇ ನಿಲ್ಲಿಸಲು ಕೋರಲಾಗಿದೆ ಎಂದು ಅಪರ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News