ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ: ಪಾಕಿಸ್ತಾನಿ ಸಾಕ್ಷಿಗಳ ಸ್ಥಿತಿ ವರದಿ ಸಲ್ಲಿಸಲು ಎನ್‌ಐಎಗೆ ಸೂಚನೆ

Update: 2018-09-19 17:06 GMT

ಪಂಚಕುಲ, ಸೆ. 19: ಅರುವತ್ತೆಂಟು ಜನರ ಸಾವಿಗೆ ಕಾರಣವಾಗಿದ್ದ 2007ರ ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ 13 ಪಾಕಿಸ್ತಾನಿ ಸಾಕ್ಷಿಗಳ ಸ್ಥಿತಿ ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಲಯ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಸೂಚಿಸಿದೆ.

ಮುಂದಿನ ವಿಚಾರಣೆ ದಿನವಾದ ಅಕ್ಟೋಬರ್ 5ರಂದು ವರದಿ ಸಲ್ಲಿಸುವಂತೆ ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಜಗದೀಪ್ ಸಿಂಗ್ ಕೇಂದ್ರ ತನಿಖಾ ಸಂಸ್ಥೆಗೆ ಸೂಚಿಸಿದ್ದಾರೆ ಎಂದು ಎನ್‌ಐಎ ಪರ ವಕೀಲ ರಾಜನ್ ಮಲ್ಹೋತ್ರಾ ತಿಳಿಸಿದ್ದಾರೆ.

ಇದಲ್ಲದೆ, ಎನ್‌ಐಎಯ ಮುಖ್ಯ ತನಿಖಾಧಿಕಾರಿ ವಿಶಾಲ್ ಗರ್ಗ್ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಯಿತು ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

ಈ ಹಿಂದಿನ ವಿಚಾರಣೆ ಸಂದರ್ಭ 13 ಪಾಕಿಸ್ತಾನಿ ರಾಷ್ಟ್ರೀಯರಲ್ಲಿ ಒಬ್ಬರು ಕೂಡ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ನೋಟಿಸು ಜಾರಿಗೊಳಿಸಿದ ಹೊರತಾಗಿಯೂ ಸಾಕ್ಷಿಗಳು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಎನ್‌ಐಎ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News