ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಯಲ್ಲಿ 45 ದಿನಗಳಲ್ಲಿ 71 ಮಕ್ಕಳ ಸಾವು

Update: 2018-09-21 06:48 GMT

ಬಹ್ರೈಚ್, ಸೆ.21: ಉತ್ತರ ಪ್ರದೇಶದ ಬಹ್ರೈಚ್‌ ಎಂಬಲ್ಲಿನ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 45 ದಿನಗಳಲ್ಲಿ ಕನಿಷ್ಠ 71 ಮಕ್ಕಳು ಮೃತಪಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. 

ಈ ವಿಚಾರವನ್ನು ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಡಿ.ಕೆ.ಸಿಂಗ್ ದೃಢಪಡಿಸಿಸ್ದಾರೆ. ‘‘ಕಳೆದ 45 ದಿನಗಳಲ್ಲಿ ಹಲವಾರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕ್ 71 ಮಕ್ಕಳು ವಿವಿಧ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜನರು ತಮ್ಮ ಮಕ್ಕಳನ್ನು ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುತ್ತಿದ್ದು, ಇಲ್ಲಿನ ಸೀಮಿತ ಸೌಲಭ್ಯಗಳಿಂದ ಬಹಳಷ್ಟು ಸಮಸ್ಯೆಗಳೆದುರಾಗುತ್ತಿವೆ ಎಂದು ಡಾ.ಸಿಂಗ್  ತಿಳಿಸಿದ್ದಾರೆ.

‘‘ಆಸ್ಪತ್ರೆಯಲ್ಲಿ 200 ಹಾಸಿಗೆಗಳಿದ್ದರೆ, ಇಲ್ಲೀಗ 450 ರೋಗಿಗಳಿದ್ದಾರೆ. ಕೆಲಸದ ಒತ್ತಡವೂ ಅತಿಯಾಗಿದ್ದು, ಜನರ ಜೀವಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಡಾ.ಸಿಂಗ್ ಹೇಳಿದ್ದಾರೆ.

ಆಮ್ಲಜನಕದ ಕೊರತೆಯಿಂದಾಗಿ ಗೋರಖಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 60 ಮಕ್ಕಳು ಸಾವಿಗೀಡಾದ ಘಟನೆ ನಡೆದು ಒಂದು ವರ್ಷದ ನಂತರ ಈ ಇನ್ನೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News