ನೆಲಮಂಗಲ: ಮರದ ದಿಮ್ಮಿ ಸಾಗಾಟದ ಲಾರಿಯ ಅವಾಂತರ; 8 ಕಿ.ಮೀ. ಟ್ರಾಫಿಕ್ ಜಾಮ್

Update: 2018-09-24 05:18 GMT

ಬೆಂಗಳೂರು, ಸೆ.24: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದರಿಂದ ದಿಮ್ಮಿಗಳು ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಕಾರಣ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾದ ಘಟನೆ ಬೆಂಗಳೂರು ತುಮಕೂರ ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲದ ಮಾಕಳಿ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.

ಘಟನೆಯಿಂದ ಹೆದ್ದಾರಿಯಲ್ಲಿ ಸುಮಾರು 8 ಕಿ.ಮೀ. ಉದ್ದದವರೆಗೂ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಲಾರಿಯೊಂದರಲ್ಲಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳು ಆಕಸ್ಮಿಕವಾಗಿ ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ.ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಇಲ್ಲಿನ ಸರ್ವೀಸ್ ರಸ್ತೆ ಕೂಡಾ ಇಕ್ಕಟ್ಟಾಗಿರುವುದರಿಂದ ನೂರಾರು ವಾಹನ ಸವಾರರು ಸಂಕಷ್ಟಕ್ಕೊಳಗಾದರು.

ಟ್ರಾಫಿಕ್‌ನಿಂದಾಗಿ ಸುಮಾರು 8 ಕಿ.ಮೀ. ಉದ್ದದವರೆಗೂ ವಾಹನಗಳು ರಸ್ತೆಯಲ್ಲೇ ಬಾಕಿಯಾದವು. ಬಳಿಕ ಮರದ ದಿಮ್ಮಿಗಳ ತೆರವಿಗೆ ಕ್ರಮ ಕೈಗೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News