9 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಡಾ.ಕಫೀಲ್ ಖಾನ್, ಸಹೋದರನ ಬಂಧನ

Update: 2018-09-24 09:01 GMT

ಲಕ್ನೋ, ಸೆ.24: 9 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಬಿಆರ್ ಡಿ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಕಫೀಲ್ ಖಾನ್ ಹಾಗು ಅವರ ಸಹೋದರ ಆದೀಲ್ ಖಾನ್ ರನ್ನು ಬಂಧಿಸಲಾಗಿದೆ.

ಬ್ಯಾಂಕ್ ಖಾತೆ ತೆರೆಯಲು ಕಫೀಲ್ ಖಾನ್ ಇನ್ನೊಬ್ಬ ವ್ಯಕ್ತಿಯ ದಾಖಲೆಗಳನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ. 2009ರಲ್ಲಿ ಕಫೀಲ್ ಖಾನ್ ಮಣಿಪಾಲ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಈ ಪ್ರಕರಣ ನಡೆದಿತ್ತು ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ಮಕ್ಕಳು ಮೃತಪಟ್ಟ ಪ್ರಕರಣದ ಒಂಬತ್ತು ಆರೋಪಿಗಳಲ್ಲಿ ಕಫೀಲ್ ಖಾನ್ ಒಬ್ಬರಾಗಿದ್ದಾರೆ. ಈ ಪ್ರಕರಣದಲ್ಲಿ ಅವರು ಜಾಮೀನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News