ಬಳಕೆದಾರರ ದೂರವಾಣಿ ಸಂಖ್ಯೆಗಳನ್ನು ಜಾಹೀರಾತು ತಲುಪಿಸಲು ಉಪಯೋಗಿಸುತ್ತಿರುವುದನ್ನು ಒಪ್ಪಿಕೊಂಡ ಫೇಸ್‍ಬುಕ್

Update: 2018-09-28 09:37 GMT

ಹೊಸದಿಲ್ಲಿ,ಸೆ.28 : ತನ್ನ ಬಳಕೆದಾರರು ಸುರಕ್ಷಾ ಉದ್ದೇಶಗಳಿಗಾಗಿ ಒದಗಿಸುವ ದೂರವಾಣಿ ಸಂಖ್ಯೆಗಳನ್ನು ಅವರಿಗೆ ಸೂಕ್ತವಾಗುವ ಜಾಹೀರಾತುಗಳನ್ನು ಅವರಿಗೆ ತಲುಪಿಸಲು ಉಪಯೋಗಿಸಿರುವ ಬಗ್ಗೆ ಫೇಸ್‍ಬುಕ್ ಒಪ್ಪಿಕೊಂಡಿದೆ.

“ಜನರು ನೀಡುವ ಮಾಹಿತಿಯನ್ನು ಅವರಿಗೆ ಉತ್ತಮ ಹಾಗೂ ಅವರ ಅಭಿರುಚಿಗೆ ತಕ್ಕಂತಹ ಜಾಹೀರಾತು ಸಹಿತ ಇತರ ಮಾಹಿತಿ ನೀಡಲು ಉಪಯೋಸಲಾಗುತ್ತದೆ,'' ಎಂದು ಫೇಸ್‍ಬುಕ್ ವಕ್ತಾರರು ಹೇಳಿದ್ದಾರೆಂದು ಟೆಕ್‍ಕ್ರಂಚ್ ವರದಿ ಮಾಡಿದೆ.

“ಫೇಸ್‍ಬುಕ್ ಬಳಕೆದಾರರು ನೀಡುವ ತಮ್ಮ ಸಂಪರ್ಕ ಮಾಹಿತಿಯನ್ನು ನಾವು ಹೇಗೆ ಉಪಯೋಗಿಸುತ್ತಿವೆಯೆಂಬ ಬಗ್ಗೆ ನಮಗೆ ಸ್ಪಷ್ಟತೆಯಿದೆ. ಬಳಕೆದಾರರು ತಾವು ನೀಡಿದ ಸಂಪರ್ಕ ಮಾಹಿತಿಯನ್ನು ಯಾವುದೇ ಸಮಯ ಬದಲಾಯಿಸಬಹುದು ಇಲ್ಲವೇ ಡಿಲೀಟ್ ಮಾಡಬಹುದು,'' ಎಂದೂ ಫೇಸ್‍ಬುಕ್ ವಕ್ತಾರರು ಹೇಳಿದ್ದಾರೆ.

ಬಳಕೆದಾರರು ಫೇಸ್‍ಬುಕ್‍ಗೆ ತಾವಾಗಿಯೇ ನೀಡುವ ಮಾಹಿತಿ ಅಥವಾ ಸೆಕ್ಯುರಿಟಿ ಉದ್ದೇಶಗಳಿಗೆ ತನ್ನ ಬಳಕೆದಾರರಿಂದ ಫೇಸ್‍ಬುಕ್‍ ಕೇಳುವ ಮಾಹಿತಿ ಅಥವಾ ಅವರು ತಮ್ಮ ಬೇರೆ ಫೇಸ್‍ಬುಕ್ ಗೆಳೆಯರಿಗೆ ನೀಡಿದ ಸಂಪರ್ಕ ಮಾಹಿತಿಯನ್ನು ಸಂಸ್ಥೆ ಪಡೆದುಕೊಳ್ಳುತ್ತದೆಯೆಂದು ಅಮೆರಿಕಾದ ಎರಡು ವಿಶ್ವವಿದ್ಯಾಲಯಗಳಲ್ಲಿ ನಡೆಸಲಾದ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಮೇಲಿನ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News