ಬೇರೆ ಜಾತಿಯ ಯುವಕನೊಂದಿಗೆ ಪರಾರಿಯಾದ ಯುವತಿಯನ್ನು ಮರಕ್ಕೆ ಕಟ್ಟಿ ಥಳಿಸಿದರು!

Update: 2018-10-06 10:37 GMT

ನವಾಡ, ಅ.6: ಬೇರೆ ಜಾತಿಯ ಯುವಕನೊಂದಿಗೆ ಪರಾರಿಯಾಗಿದ್ದ 18 ವರ್ಷದ ಯುವತಿಯೋರ್ವಳನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಬಿಹಾರದ  ನವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪರಾರಿಯಾಗಿದ್ದ ಯುವತಿಯನ್ನು ಕುಟುಂಬಸ್ಥರು ಕರೆತಂದಿದ್ದು, ನಂತರ ಗ್ರಾಮ ಪಂಚಾಯತ್ ಸದಸ್ಯರು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಯುವತಿಯನ್ನು ಮರಕ್ಕೆ ಕಟ್ಟಿ ಹಾಕಿರುವುದು ವಿಡಿಯೋವೊಂದರಲ್ಲಿ ಕಾಣಿಸುತ್ತದೆ. ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಯುವತಿ ನೆಲದಲ್ಲಿ ಬಿದ್ದುಕೊಂಡಿರುವುದು ಕಾಣಿಸುತ್ತದೆ. ಪುರುಷನೊಬ್ಬ ಆಕೆಯ ಕೂದಲನ್ನು ಹಿಡಿದೆಳೆದು ಮೇಲಕ್ಕೆತ್ತುತ್ತಾನೆ. ನಂತರ ಮತ್ತೊಬ್ಬ ಆಕೆಗೆ ಕುಡಿಯಲು ನೀರು ನೀಡುತ್ತಿರುವುದು ವಿಡಿಯೋದಲ್ಲಿದೆ.

“ನನ್ನ ಪುತ್ರಿಗೆ ನಮ್ಮ ಜಾತಿಯ ಹುಡುಗನನ್ನು ಮದುವೆ ಮಾಡಿಕೊಡಬೇಕೆಂದು ನಾನು ಬಯಸಿದ್ದೆ” ಎಂದು ಯುವತಿಯ ತಂದೆ ಹೇಳುತ್ತಾನೆ. “ವಿದ್ಯುತ್ ಇಲ್ಲದ ರಾತ್ರಿ ಆಕೆ ಮನೆಯಿಂದ ಪರಾರಿಯಾಗಿದ್ದಳು. ನಾವು ಬೀದಿಯೆಲ್ಲಾ ಹುಡುಕಾಡಿದೆವು” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News