ಪಾಕಿಸ್ತಾನದ ಐಎಸ್ ಐ, ಅಮೆರಿಕದ ಏಜೆನ್ಸಿಗಳ ಶಂಕಿತ ಏಜೆಂಟ್ ಬಂಧನ

Update: 2018-10-08 10:31 GMT

ನಾಗ್ಪುರ, ಅ.8: ಇಲ್ಲಿನ ಬ್ರಹ್ಮೋಸ್ ಏರೋಸ್ಪೇಸ್ ಸೆಂಟರ್ ಸಮೀಪ ಭದ್ರತಾ ಸಿಬ್ಬಂದಿ ಐಎಸ್ ಐ ಮತ್ತು ಅಮೆರಿಕನ್ ಗುಪ್ತಚರ ಏಜೆನ್ಸಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬ್ರಹ್ಮೋಸ್ ಮಿಸೈಲ್ ಬಗ್ಗೆ ಆತ ಐಎಸ್ ಐ ಮತ್ತು ಅಮೆರಿಕನ್ ಏಜೆನ್ಸಿಗಳಿಗೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶ ಎಟಿಎಸ್ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ನಿಶಾಂತ್ ಅಗರ್ವಾಲ್ ನನ್ನು ಬಂಧಿಸಲಾಗಿದೆ.

ನಾಗ್ಪುರದ ಬ್ರಹ್ಮೋಸ್ ಏರೋಸ್ಪೇಸ್ ಸೆಂಟರ್ ನಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಅಮೆರಿಕಕ್ಕೆ ಈತ ಬ್ರಹ್ಮೋಸ್ ಏರೋಸ್ಪೇಸ್ ನ ಪ್ರಮುಖ ರಹಸ್ಯಗಳನ್ನು ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈತ ಇಲ್ಲಿ ಕೆಲಸ ಮಾಡುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News