ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2018-10-09 09:52 GMT

ಹೊಸದಿಲ್ಲಿ, ಅ.9: ಕೇಂದ್ರ ಸಚಿವ ಹಾಗೂ ಮಾಜಿ ಸಂಪಾದಕ ಎಂಜೆ ಅಕ್ಬರ್ ಹೆಸರು ‘ಮಿ ಟೂ’ ಚಳುವಳಿಯಲ್ಲಿ ಕೇಳಿಬಂದಿದ್ದು, ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

 ಭಾರತದಲ್ಲಿ ಟ್ವಿಟರ್‌ನಲ್ಲಿ ಆರಂಭವಾಗಿರುವ ‘ಮೀ ಟೂ’ ಚಳುವಳಿಯಲ್ಲಿ ಪ್ರಿಯಾ ಅವರು ತಾನು ಎದುರಿಸಿರುವ ಲೈಂಗಿಕ ಕಿರುಕುಳವನ್ನು ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಕಳೆದ ವರ್ಷ ‘ಮಿ ಟೂ’ ಅಭಿಯಾನ ಆರಂಭವಾದಾಗ ಪ್ರಿಯಾ ಮೊದಲ ಬಾರಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದರು.

ತನ್ನ ಕಿರಿಯ ಸಚಿವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘‘ಇವೆಲ್ಲವೂ ಗಂಭೀರ ಆರೋಪ...ಇದೊಂದು ಲೈಂಗಿಕ ಕಿರುಕುಳ ಆರೋಪ. ನೀವು ಮಹಿಳಾ ಸಚಿವೆಯಾಗಿದ್ದೀರಿ. ಈ ಆರೋಪದ ಬಗ್ಗೆ ತನಿಖೆಗೆ ಆದೇಶಿಸುತ್ತೀರಾ? ಎಂದು ಟ್ರಿಬ್ಯೂನ್ ವರದಿಗಾರ್ತಿ ಸ್ಮಿತಾ ಶರ್ಮಾ ಅವರು ಸುಶ್ಮಾ ಸ್ವರಾಜ್‌ರನ್ನು ಪ್ರಶ್ನಿಸಿದ್ದರು.ಇದಕ್ಕೆ ಸುಶ್ಮಾ ಯಾವುದೇ ಉತ್ತರ ನೀಡದೆ ಮುಂದೆ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News