ವಿಜಯ್ ಹಝಾರೆ ಟ್ರೋಫಿ: ಜಾರ್ಖಂಡ್ ತಂಡದಲ್ಲಿ ಧೋನಿ ಆಡುವ ಸಾಧ್ಯತೆ

Update: 2018-10-10 05:10 GMT

ರಾಂಚಿ, ಅ.10: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ತನ್ನ ತವರು ರಾಜ್ಯ ಜಾರ್ಖಂಡ್ ಪರ ಆಡುವ ಸಾಧ್ಯತೆಯಿದೆ.

ಈಗ ಧೋನಿ ಅವರು ಜಾರ್ಖಂಡ್ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಏಶ್ಯಕಪ್‌ನಿಂದ ವಾಪಸಾದ ಬಳಿಕ ಜಾರ್ಖಂಡ್ ಆಡಿರುವ ವಿಜಯ್ ಹಝಾರೆ ಟ್ರೋಫಿಯ ಲೀಗ್ ಪಂದ್ಯಗಳಲ್ಲಿ ಧೋನಿ ಆಡಿರಲಿಲ್ಲ. ಇದೀಗ ಜಾರ್ಖಂಡ್ ಏಕದಿನ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಬಲ ತುಂಬಲು ಧೋನಿ ಆಡುವ ಸಾಧ್ಯತೆಯಿದೆ.

ಧೋನಿ ವಿಕೆಟ್‌ಕೀಪಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೆ, ಮಧ್ಯಮ ಓವರ್‌ನಲ್ಲಿ ಅವರ ಬ್ಯಾಟಿಂಗ್ ಮೊದಲಿನ ಮೊನಚು ಕಳೆದುಕೊಂಡಿದೆ. ಧೋನಿ ಈ ವರ್ಷ ಕೇವಲ 15 ಏಕದಿನ ಹಾಗೂ 7 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ಬೆಂಗಳೂರಿನಲ್ಲಿ ನಡೆಯುವ ಟೂರ್ನಿಯ ಎಲ್ಲ ನಾಕೌಟ್ ಪಂದ್ಯಗಳಲ್ಲಿ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News