ಭಾರತದ ಸಾಲವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗಿಂತ ಕಡಿಮೆ: ಐಎಂಎಫ್

Update: 2018-10-10 16:59 GMT

ವಾಶಿಂಗ್ಟನ್,ಅ.10: ಭಾರತದ ಸಾಲವು ಅತ್ಯುತ್ತಮ ಅಥವಾ ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಮಾರುಕಟ್ಟೆಗಳಿಗಿಂತ ಕಡಿಮೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ವಿತ್ತೀಯ ನಿಧಿ (ಐಎಂಎಫ್) ನ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಜಾಗತಿಕ ಸಾಲವು 2017ರಲ್ಲಿ 182 ಟ್ರಿಲಿಯನ್ ಡಾಲರ್‌ಗಳ ಹೊಸ ದಾಖಲೆ ಮಟ್ಟವನ್ನು ತಲುಪಿದೆ ಎಂದವರು ಎಚ್ಚರಿಸಿದ್ದಾರೆ.

ಜಗತ್ತಿನ ಜಿಡಿಪಿಯ ಶೇಕಡಾವಾರಿಗೆ ಹೋಲಿಸಿದರೆ ಭಾರತದ ಸಾಲವು ಜಾಗತಿಕ ಸಾಲಕ್ಕಿಂತ ಗಣನೀಯವಾಗಿ ಕಡಿಮೆಯಿದೆ ಎಂದು ಐಎಮ್‌ಎಫ್‌ನ ಆರ್ಥಿಕ ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗೆಸ್ಪರ್ ತಿಳಿಸಿದ್ದಾರೆ. 2017ರಲ್ಲಿ ಭಾರತದಲ್ಲಿ ಖಾಸಗಿ ಸಾಲವು ಜಿಡಿಪಿಯ ಶೇ.54.5 ಆಗಿದ್ದರೆ ಸರಕಾರಿ ಸಾಲವು ಜಿಡಿಪಿಯ ಶೇ.70.4 ಆಗಿತ್ತು. ಒಟ್ಟಾರೆ ಸಾಲವು ಜಿಡಿಪಿಯ ಶೇ.125 ಆಗಿತ್ತು. ಇದಕ್ಕೆ ಹೋಲಿಸಿದರೆ ಚೀನಾದ ಸಾಲ ಜಿಡಿಪಿಯ ಶೇ.247 ಇದೆ ಎಂದು ಗೆಸ್ಪರ್ ತಿಳಿಸಿದ್ದಾರೆ. ಭಾರತದ ಸಾಲವು ಅಭಿವೃದ್ಧಿ ಹೊಂದಿದ ಆರ್ಥಿಕತೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಮಾರುಕಟ್ಟೆಗಳ ಸರಾಸರಿಗಿಂತ ಕಡಿಮೆಯದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News