ಸಾವಯವ ಉತ್ಪನ್ನಗಳು ಬಳಸಲು ಹೃದ್ರೋಗ ತಜ್ಞ ಡಾ.ಮಂಜುನಾಥ್ ಕರೆ

Update: 2018-10-10 18:46 GMT

ಬೆಂಗಳೂರು, ಅ. 10: ಸಾವಯವ ಉತ್ಪನ್ನಗಳು ಪ್ರಕೃತಿದತ್ತ ಕೊಡುಗೆಯಾಗಿದ್ದು, ಅವುಗಳನ್ನು ಹೆಚ್ಚಾಗಿ ಬಳಸುವ ಮೂಲಕ ಅಂತಹ ಉತ್ಪನ್ನಗಳನ್ನು ಉತ್ತೇಜಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿದತ್ತ ವಸ್ತುಗಳನ್ನು ಬಳಸಬೇಕು ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕರೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ‘ಅಕ್ಷಯಕಲ್ಪ’ ಹೊಸ ಉತ್ಪನ್ನ ಲ್ಯಾಕ್ಟೋಸ್ ಫ್ರೀ ಫ್ರೆಶ್ ಮಿಲ್ಕ್‌ನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಂಸ್ಥೆ ಕೇವಲ ಆರೋಗ್ಯ ಪೂರ್ಣ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಷ್ಟೇ ಅಲ್ಲ, ರೈತರಿಗೆ ಲಾಭಯುಕ್ತ ಮಾಡುವುದು, ತಂತ್ರಜ್ಞಾನಾಧಾರಿತಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಈ ಉಪಕ್ರಮ ದೇಶದ ಭವಿಷ್ಯ ಹಾಗೂ ಕೃಷಿ ಪ್ರಗತಿಗೆ ಪೂರಕ. ಸಾವಯವ ಹಾಲು ಉತ್ಪನ್ನಗಳು ಹೆಚ್ಚು ಪ್ಟೌಕಾಂಶಗಳು ಮತ್ತು ಆರೋಗ್ಯಕರ. ಅಲ್ಲದೆ, ಇವುಗಳಲ್ಲಿ ಯಾವುದೇ ರೀತಿಯ ಕಲಬೆರಕೆ ಇರುವುದಿಲ್ಲ. ಆ ಮೂಲಕ ಗ್ರಾಹಕರಿಗೆ ಪ್ರಯೋಜನಕಾರಿ. ಇವು ಜೀವನಶೈಲಿಗೆ ಪೂರಕವಾಗಿರುತ್ತವೆ ಎಂದರು.

ಸಂಸ್ಥೆಯ ಸಿಇಓ ಶಶಿಕುಮಾರ್, ಅಕ್ಷಯಕಲ್ಪ ನೂತನ ಮಾದರಿಯ ಆಷ್ಕಾರಗಳು ಮತ್ತು ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಡೈರಿ ಉತ್ಪನ್ನಗಳನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ಯಲಾಗುತ್ತಿದೆ. ಸಣ್ಣ ಉದ್ಯಮಿಗಳಿಗೆ ಮತ್ತು ರೈತಾಪಿ ವರ್ಗಕ್ಕೆ ಹೆಚ್ಚು ಲಾಭ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News