ವಿಧಾನ ಪರಿಷತ್ ನೂತನ ಸದಸ್ಯರಾಗಿ ರಮೇಶ್ ಗೌಡ, ವೇಣುಗೋಪಾಲ್ ಪ್ರಮಾಣ ವಚನ ಸ್ವೀಕಾರ

Update: 2018-10-11 14:42 GMT

ಬೆಂಗಳೂರು, ಅ. 11: ಇತ್ತೀಚೆಗೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಪರಿಷತ್ ನೂತನ ಸದಸ್ಯರಾದ ರಮೇಶ್‌ಗೌಡ ಹಾಗೂ ಎಂ.ಸಿ.ವೇಣುಗೋಪಾಲ್ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಗುರುವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ 106ರಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನೂತನ ಸದಸ್ಯರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನವನ್ನು ಬೋಧಿಸಿದರು

ಮೊದಲಿಗೆ ರಮೇಶ್ ಗೌಡ ಅವರು ಚನ್ನಮ್ಮ ದೇವೇಗೌಡ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅನಂತರ ಎಂ.ಸಿ.ವೇಣುಗೋಪಾಲ್ ಅವರು ಕುಟುಂಬ ಸದಸ್ಯರು ಬರುವವರೆಗೂ ಕಾದು ಅವರ ಬಂದ ಬಳಿಕ ಪ್ರಮಾಣ ವಚನ ಸ್ವೀಕರಿದರು.

ನೂತನ ಸದಸ್ಯರಾದ ರಮೇಶ್ ಗೌಡ ಹಾಗೂ ವೇಣುಗೋಪಾಲ್ ಅವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಈ ವೇಳೆ ಸಚಿವರಾದ ಶಿವಶಂಕರರೆಡ್ಡಿ, ವೆಂಕಟ ರಮಣಪ್ಪ, ಸಂಸದ ಮುದ್ದಹನುಮೇಗೌಡ, ಮೇಲ್ಮನೆ ಸದಸ್ಯರಾದ ಐವಾನ್ ಡಿಸೋಜಾ, ರಿಝ್ವಿನ್ ಅರ್ಶದ್, ಕಾರ್ಯದರ್ಶಿ ಮಹಾಲಕ್ಷ್ಮಿ ಉಪಸ್ಥಿತರಿದ್ದರು.

‘ನನ್ನ ಮೇಲಿನ ಎಲ್ಲ ಆರೋಪಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಕ್ಕೂ ನನ್ನ ವಕೀಲರ ಮೂಲಕ ಉತ್ತರ ಕೊಡುವೆ. ಪಕ್ಷದ ಮಾಜಿ ಶಾಸಕ ಅಪ್ಪಾಜಿಗೌಡ ಸೇರಿ ಹಲವು ಮಂದಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದಾರೆ. ಕೆಲವರು ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿಲ್ಲ’

-ರಮೇಶ್‌ಗೌಡ ಪರಿಷತ್ ನೂತನ ಸದಸ್ಯ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News