2006ರಲ್ಲಿ ಮೊಟ್ಟಮೊದಲ ಬಾರಿಗೆ ‘ಮೀಟೂ’ ಚಳವಳಿ ಹುಟ್ಟುಹಾಕಿದವರು ಯಾರು ಗೊತ್ತಾ?

Update: 2018-10-14 08:00 GMT

ಹೊಸದಿಲ್ಲಿ, ಅ.14: ದೇಶಾದ್ಯಂತ ವೇಗ ಪಡೆದಿರುವ ‘ಮೀಟೂ’ ಚಳವಳಿಯ ಮೂಲಕ ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ. ಹಲವು ಬಾಲಿವುಡ್ ನಟಿಯರು ಮತ್ತು ಪತ್ರಕರ್ತೆಯರು ಖ್ಯಾತನಾಮರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಆದ್ದರಿಂದ ಈ ಚಳವಳಿಯ ರೂವಾರಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಇರಬಹುದು.

‘ಮೀಟೂ’ ಚಳವಳಿಯನ್ನು 2006ರಲ್ಲಿ ಮೊದಲ ಬಾರಿಗೆ ತರಾನಾ ಬರ್ಕ್ ಹುಟ್ಟುಹಾಕಿದರು. ಕಡಿಮೆ ಆದಾಯದ ಸಮುದಾಯದ ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಅವರಿಗೆ ನೆರವಾಗುವ ಉದ್ದೇಶದಿಂದ ಬರ್ಕ್ ಈ ಚಳವಳಿ ಹುಟ್ಟುಹಾಕಿದರು. ಲೈಂಗಿಕ ಕಿರುಕುಳಕ್ಕೆ ತುತ್ತಾದ ಮಹಿಳೆಯರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಜತೆಗೆ, ಇಂತಹ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಮ್ಮ ಪಯಣದಲ್ಲಿ ತಾವು ಏಕಾಂಗಿಯಲ್ಲ ಎನ್ನುವುದನ್ನು ಮನವರಿಕೆ ಮಾಡಿ ಧೈರ್ಯ ನೀಡುವುದು ಇದರ ಉದ್ದೇಶವಾಗಿತ್ತು.

ನ್ಯೂಯಾರ್ಕ್‍ನ ಬರ್ಕ್ ಮೂಲತಃ ಆಫ್ರಿಕದವರು. 45 ವರ್ಷದ ಇವರು ನಾಗರಿಕ ಹಕ್ಕುಗಳ ಹೋರಾಟಗಾರ್ತಿ. 2007ರಲ್ಲಿ ಟೈಮ್ ವರ್ಷದ ವ್ಯಕ್ತಿಯಾಗಿ ಇತರ ಹೋರಾಟಗಾರರ ಜತೆ ಆಯ್ಕೆಯಾಗಿದ್ದರು.

ಜೆಸ್ಟ್ ಬಿ ಇನ್‍ಕಾರ್ಪೊರೇಷನ್‍ನಲ್ಲಿ ಉದ್ಯೋಗಿಯಾಗಿದ್ದಾಗ 2003ರಲ್ಲಿ "ಮೈ ಸ್ಪೇಸ್"ನಲ್ಲಿ ಬುರ್ಕೆ ಮೊಟ್ಟಮೊದಲ ಬಾರಿಗೆ "ಮೀ ಟೂ" ಎಂಬ ಪದಪುಂಜ ಸೃಷ್ಟಿಸಿದ್ದರು. ಕಪ್ಪು ಮಹಿಳೆಯರ ಕಲ್ಯಾಣ ಯೋಜನೆಯನ್ನು ಇವರು ಆರಂಭಿಸಿದ್ದರು. ತಾಯಿಯ ಸ್ನೇಹಿತನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ಬಾಲಕಿಯೊಬ್ಬಳು ಇವರ ಬಳಿ ಹೇಳಿಕೊಂಡ ಬಳಿಕ ಈ ಚಳವಳಿ ರೂಪುಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News