ದೇವಿ ಪ್ರತಿಮೆಗೆ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ!

Update: 2018-10-15 07:10 GMT

ವಿಶಾಖಪಟ್ಣಂ, ಅ.15: ದಸರಾ ಹಬ್ಬ ಆಚರಣೆಯ ನಿಮ್ಮಿತ್ತ ಇಲ್ಲಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದೇವಿಯ ವಿಗ್ರಹವನ್ನು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳಿಂದ ಅಲಂಕೃತಗೊಳಿಸಲಾಗಿದೆ. ಭಕ್ತರು 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದು, ಈ ಆಭರಣಗಳ ಜತೆಗೆ ರೂ 2.5 ಕೋಟಿ ಮೌಲ್ಯದ ಕರೆನ್ಸಿ ನೋಟುಗಳಿಂದಲೂ ದೇವಸ್ಥಾನದ ಒಳಾಂಗಣವನ್ನು ಅಲಂಕರಿಸಲು ಉಪಯೋಗಿಸಲಾಗಿದೆ.

ಪ್ರತಿ ವರ್ಷ ಈ ದೇವಸ್ಥಾನದಲ್ಲಿ ದೇವಿ ನವರಾತ್ರಿ ಉತ್ಸವಲು ಸಂದರ್ಭ ದೇವಿಯ ವಿಗ್ರಹವನ್ನು ಚಿನ್ನಾಭರಣಗಳ  ಜತೆ ದೇವಸ್ಥಾನದ ಗೋಡೆಗಳಿಗೆ ಹಾಗೂ ಗರ್ಭಗುಡಿಯ ನೆಲವನ್ನು ಎಲ್ಲಾ ಮುಖಬೆಲೆಯ ನೋಟುಗಳನ್ನೂ ಉಪಯೋಗಿಸಿ ಅಲಂಕರಿಸಲಾಗುತ್ತದೆ.

ಈ ಬಾರಿಯ ದಸರಾ ಆಚರಣೆಗೆ ಸುಮಾರು 200 ಭಕ್ತರು ಹಣ ಹಾಗೂ ಚಿನ್ನಾಭರಣ ದೇಣಿಗೆ ನೀಡಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News