ಅಲಹಾಬಾದ್ ನಗರ ಇಂದಿನಿಂದ ಪ್ರಯಾಗ್‌ರಾಜ್

Update: 2018-10-16 08:07 GMT

ಹೊಸದಿಲ್ಲಿ, ಅ.16: ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್ ಎಂದು ಮರು ನಾಮಕರಣಗೊಳಿಸುವ ಪ್ರಸ್ತಾವಕ್ಕೆ ಉತ್ತರಪ್ರದೇಶದ ಸಂಪುಟ ಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಗಿದೆ.

 ‘‘ಅಲಹಾಬಾದ್ ನಗರವನ್ನು ಇಂದಿನಿಂದಲೇ ಪ್ರಯಾಗ್‌ರಾಜ್ ಎಂದು ಕರೆಯಲಾಗುವುದು’’ಎಂದು ರಾಜ್ಯ ಆರೋಗ್ಯ ಸಚಿವ ಸಿದ್ದಾರ್ಥ್ ನಾತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಪಕ್ಷಗಳ ತೀವ್ರ ವಿರೋಧದ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2019ರ ಕುಂಭ ಮೇಳಕ್ಕೆ ಮೊದಲು ಅಲಹಾಬಾದ್ ನಗರದ ಹೆಸರನ್ನು ಬದಲಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು.

ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗು ಸಮಾಜವಾದಿ ಸುಪ್ರಿಮೋ ಅಖಿಲೇಶ್ ಯಾದವ್,‘‘ಸರಕಾರ ಹೆಸರನ್ನು ಮರು ನಾಮಕರಣ ಮಾಡುವ ಮೂಲಕ ತಾನು ಕೆಲಸ ಮಾಡುತ್ತಿದ್ದೇನೆಂದು ತೋರಿಸಿಕೊಳ್ಳುತ್ತಿದೆ’’ ಎಂದು ಹೇಳಿದರು.

ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಲಹಾಬಾದ್ ನಗರದ ಹೆಸರನ್ನು ಬದಲಿಸುವ ಮೂಲಕ ಇತಿಹಾಸಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಯೋಗಿ ಸರಕಾರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮುಘಲ್‌ಸರಾಯ್ ರೈಲ್ವೆ ಸ್ಟೇಶನ್‌ನ್ನು ದೀನ್ ದಯಾಳ್ ಉಪಾಧ್ಯಾಯ ಸ್ಟೇಶನ್ ಎಂದು ಮರುನಾಮಕರಣ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News