ಬಿಜೆಪಿ ನಾಯಕರು, ಮಂತ್ರಿಗಳಿಂದ ಬೇಟಿ ಬಚಾವೋ: ಎಂ.ಜೆ. ಅಕ್ಬರ್ ವಿಚಾರದಲ್ಲಿ ಮೋದಿಯನ್ನು ಕುಟುಕಿದ ರಾಹುಲ್

Update: 2018-10-16 12:19 GMT

ಹೊಸದಿಲ್ಲಿ, ಅ.16: ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಬಿಜೆಪಿ ನಾಯಕರು, ಮಂತ್ರಿಗಳು, ಶಾಸಕರಿಂದ ಭೇಟಿ ಬಚಾವೋ’ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಮೋದಿಜಿ ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ಒಳ್ಳೆಯ ಘೋಷಣೆ ನೀಡಿದ್ದಾರೆ. ಆದರೆ ನರೇಂದ್ರ ಮೋದಿಯವರ ಸಚಿವರ ವಿರುದ್ಧವೇ ಆರೋಪ ಕೇಳಿಬಂತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರೇ ಅತ್ಯಾಚಾರ ಎಸಗುತ್ತಾರೆ. ಆದರೆ ಪ್ರಧಾನಿ ಒಂದು ಮಾತನ್ನೂ ಆಡುವುದಿಲ್ಲ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News