ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ: ಪರಮೇಶ್ವರ್ ವಿಶ್ವಾಸ

Update: 2018-10-17 07:21 GMT

ಬೆಂಗಳೂರು, ಅ.17: ಉಪ ಚುನಾವಣೆಯಲ್ಲಿ ಎಲ್ಲಾ ಐದು ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಆ ಮೂಲಕ ಸಮ್ಮಿಶ್ರ ಸರಕಾರದ ಸುಭದ್ರ ಎಂಬ ಸಂದೇಶ ರವಾನಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗಪುರದಲ್ಲಿರುವ ಅಂಬೇಡ್ಕರ್ ಪುಣ್ಯ ಭೂಮಿಗೆ ಬೆಂಗಳೂರಿನಿಂದ ಹೊರಟಿರುವ ‘ದೀಕ್ಷಾ ಯಾತ್ರೆ’ಗೆ ವಿಧಾನಸೌಧದ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಬುಧವಾರ ಬೆಳಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಕೈ ಚೆಲ್ಲಲಿಲ್ಲ. ಇಲ್ಲಿ ಮಾತುಕತೆ ಮೂಲಕ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಸಮ್ಮಿಶ್ರ ಸರಕಾರದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಮುಖ್ಯ ಎಂದ ಪರಮೇಶ್ವರ್, ಈ ಹೊಂದಾಣಿಕೆ ಕುರಿತಂತೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದರು.

*ಭಡ್ತಿ ಮೀಸಲಾತಿ ಕಾಯ್ದೆ ಶೀಘ್ರ ಜಾರಿಯಾಗಬೇಕಿದೆ
ಎಸ್ಸಿ-ಎಸ್ಟಿ ಸಮುದಾಯಗಳ ಹಿತ ಕಾಯುವ ಭಡ್ತಿ ಮೀಸಲಾತಿ ಕಾಯ್ದೆ ಶೀಘ್ರವೇ ಜಾರಿ ಆಗಬೇಕಿದೆ. ಈ ಕಾಯ್ದೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿದೆ. ಅದಕ್ಕೂ ಮುನ್ನ ಕಾಯ್ದೆ ಜಾರಿ ಆಗಬೇಕು. ಈ ಸಂಬಂಧ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಾನು ಸಿಎಂ ಜೊತೆ ಚರ್ಚೆ ನಡೆಸ್ತೇನೆ. ಬಳಿಕ ಕಾಯ್ದೆ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

 ದೀಕ್ಷಾ ಯಾತ್ರೆಯು ಬೆಂಗಳೂರಿನಿಂದ 22 ಬಸ್‌ಗಳ ಮೂಲಕ ಹೊರಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News