ಕಾಂಗ್ರೆಸ್ ಜೊತೆ ಕೈಜೋಡಿಸಿದ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ

Update: 2018-10-17 10:47 GMT

ಹೊಸದಿಲ್ಲಿ, ಅ.17: ಬಿಜೆಪಿ ನಾಯಕ ಜಸ್ವಂತ್ ಸಿಂಗ್ ರ ಪುತ್ರ ಮನ್ವೇಂದ್ರ ಸಿಂಗ್ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಸೆಪ್ಟಂಬರ್  22ರಂದು ಸಿಂಗ್ ಬಿಜೆಪಿ ತೊರೆದಿದ್ದರು.

ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಮನ್ವೇಂದ್ರ ಸಿಂಗ್ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ರನ್ನು ಭೇಟಿಯಾಗಿದ್ದರು.
ವಾಜಪೇಯಿ ನೇತೃತ್ವದ ಸರಕಾರದಲ್ಲಿ ಪ್ರಭಾವೀ ಸಚಿವರಾಗಿದ್ದ ಜಸ್ವಂತ್ ಸಿಂಗ್‌ರನ್ನು ಮೂಲೆಗುಂಪು ಮಾಡುವಲ್ಲಿ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಕೈವಾಡವಿರುವ ಶಂಕೆಯನ್ನು ಮನ್ವೇಂದ್ರ ಸಿಂಗ್ ಹಲವು ಬಾರಿ ವ್ಯಕ್ತಪಡಿಸಿದ್ದರು.

ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದು ತನ್ನ ಬಹುದೊಡ್ಡ ಪ್ರಮಾದವಾಗಿದೆ. ಬಿಜೆಪಿಯೊಂದಿಗೆ ತನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ತು. ಕಳೆದ ನಾಲ್ಕೂವರೆ ವರ್ಷಗಳಿಂದ ಬಿಜೆಪಿ ನಾಯಕತ್ವಕ್ಕೆ ವಿಧೇಯನಾಗಿದ್ದೆ. ಆದರೆ ಇನ್ನು ಕಾಯಲು ಸಾಧ್ಯವಿಲ್ಲ. ತಾಳ್ಮೆಯ ಕಾಲ ಮುಗಿದಿದೆ . ಹಿಂದುತ್ವದ ಅರ್ಥವೇನು ಎಂಬುದು ಬಿಜೆಪಿ ಮುಖಂಡರಿಗೆ ಗೊತ್ತಿಲ್ಲ ಎಂದು ಮನ್ವೇಂದ್ರ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News